‘ಪ್ರಿಯದರ್ಶಿನಿ ಸೊಸೈಟಿ ಪ್ರಗತಿ ಶ್ಲಾಘನೀಯ’

Contributed by: lokeshsurathkal@gmail.com|Vijaya Karnataka•
priyadarshini society recognized for its progress
ಜಾಹಿರಾತು ಸುದ್ದಿ *ಪ್ರಿಯದರ್ಶಿನಿ ಸೊಸೈಟಿ

ವಿಕ ಸುದ್ದಿಲೋಕ ಹಳೆಯಂಗಡಿ
ಯಾವುದೇ ಸೊಸೈಟಿ ಅಥವಾ ಸಂಸ್ಥೆ ಹುಟ್ಟು ಹಾಕುವುದು ಸುಲಭ. ಪ್ರಿಯದರ್ಶಿನಿ ಸೊಸೈಟಿ ಹುಟ್ಟು ಹಾಕಿ ಅದನ್ನು ಉತ್ತಮ ರೀತಿಯಲ್ಲಿಮುನ್ನಡೆಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನಾರ್ಹರು ಎಂದು ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಆಲ್ವಿನ್ ಕ್ಲೆಮೆಟ್ ಕುಟಿನ್ನೋ ಹೇಳಿದರು.

ಅವರು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿನಡೆದ ಸಹಕಾರ ಸಪ್ತಾಹ 2026 ಉದ್ಘಾಟಿಸಿ ಮಾತನಾಡಿದರು.

ಸಹಕಾರ ರಂಗದಲ್ಲಿಸೇವೆ ಸಲ್ಲಿಸಿದ್ದ ಪಡುಪಣಂಬೂರು ನೇಕಾರರ ಸೇವಾ ಸಹಕಾರಿ ಸಂಘ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಬಿ. ರತ್ನಾಕರ ಯಾನೆ ಕಾಂತಣ್ಣ ಗುರಿಕಾರ,ದಕ ಜಿಲ್ಲಾಕೋಳಿ ಮಾರಾಟಗಾರರ ಸಂಘದ ನಿರ್ದೇಶಕ, ಪಡುಪಣಂಬೂರು ವ್ಯವಸಾಯಿಕ ಸಹಕಾರಿ ಸಂಘ (ಪಿಸಿಎ ಸೊಸೈಟಿ)ದ ಮಾಜಿ ನಿರ್ದೇಶಕ ವಿನೋದ್ ಸಾಲ್ಯಾನ್ ಹಳೆಯಂಗಡಿ ಹಾಗೂ ಹಳೆಯಂಗಡಿ ಪಿಸಿಎ ಸೊಸೈಟಿ ನಿವೃತ್ತ ಅಧಿಕಾರಿ ಸುಮಂಗಳಾ ಭಟ್ ಅವರನ್ನು ಸನ್ಮಾನಿಸಲಾಯಿತು.

ಸುರತ್ಕಲ್ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮೂಲ್ಯ ಮಾತನಾಡಿದರು. ಸೊಸೈಟಿಯ ಉಪಾಧ್ಯಕ್ಷ ವಿಜಯ ಕುಮಾರ್ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಧನಂಜಯ ಮಟ್ಟು, ಉಮಾನಾಥ ಜೆ. ಶೆಟ್ಟಿಗಾರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸ್ವಾಗತಿಸಿದರು. ಲೆಕ್ಕಿಗ ಲೋಲಾಕ್ಷಿ ಸ್ವಾಗತಿಸಿದರು. ಶಾಖಾ ಪಬಂಧಕಿ ಪ್ರಜ್ಞಾಶ್ರೀ ವಂದಿಸಿದರು. ಸಾಲ ವಿಭಾಗದ ಹಿರಿಯ ವ್ಯವಸ್ಥಾಪಕ ಮೋಹನ್ ದಾಸ್ ಉಪಸ್ಥಿತರಿದ್ದರು.

16 ಪ್ರಿಯ