ಯರಗಟ್ಟಿ: ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದ ಪಾಲಕಿ ಅಮಾನತಿಗೆ ಆಗ್ರಹಿಸಿ ಕರವೇ, ಪರಿಶಿಷ್ಟ ಪಂಗಡ ಸಂಘಟನೆ, ದಲಿತ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ನಾನಾ ಸಂಘಟನೆಗಳ ಸದಸ್ಯರು ಹಾಗೂ ಯರಗಟ್ಟಿ ತಾಲೂಕು ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಸಮಾಜ ಕಲ್ಯಾಣ ಇಲಾಖೆ ತಾಲೂಕಾ ಅಧಿಕಾರಿಯನ್ನೂ ಅಮಾನತು ಮಾಡಬೇಕು ಎಂದು ಪಟ್ಟಹಿಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಾಗೂ ಪ್ರತಿಭಟನಾಕಾರರ ನಡುವೆ ವಾದವಿವಾದ ನಡೆಯಿತು. ಡಾ.ಮಲ್ಲಿಕಾರ್ಜುನ ಮಾತನಾಡಿ, ವಸತಿ ನಿಲಯದ ಪಾಲಕಿ ವರ್ಗಾವಣೆ ಮಾಡಲಾಗುವುದು. ಅಲ್ಲದೇ ಅಮಾನತಿಗೆ ವರದಿ ಮಾಡಲಾಗುವುದು. ಇಲಾಖೆಯ ತಾಲೂಕು ಅಧಿಕಾರಿಗೂ ನೋಟಿಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ ಮಾಧವಾನಂದ ಗುಂಡಪ್ಪಗೋಳ, ಎಇಒ ಬಸವರಾಜ ಆಯನಗೌಡರ, ವಾಲ್ಮಿಕಿ ಸಮಾಜದ ಮುಖಂಡ ಸತ್ಯೆಪ್ಪ ನಾಯ್ಕರ, ಕರವೇ ತಾಲೂಕಾಧ್ಯಕ್ಷ ಡಿ.ಕೆ.ರಪೀಕ, ದಲಿತ ಸಂಘಟನೆ ಮುಖಂಡರಾದ ಭಾಸ್ಕರ ಹಿರೇಮೇತ್ರಿ, ಸಂತೋಷ ಚನ್ನಮೇತ್ರಿ, ಚಿದಂಬರ ಕಟ್ಟಿಮನಿ, ರೈತ ಸಂಘ ತಾಲೂಕಾಧ್ಯಕ್ಷ ರಂಗಪ್ಪ ಗಂಗರಡ್ಡಿ, ಸರಕಾರಿ ಮಾದರಿ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ, ವೆಂಕಣ್ಣ ಹುರುಕನವರ, ಸುರೇಶ ಮುರಗೋಡ ಹಾಗೂ ಇತರರು ಇದ್ದರು.
16 ವಾಯ್ ಜಿಟ 1 : ಪೋಟೋ ಶಿರ್ಷಿಕೆ : 1)
ವಸತಿ ನಿಲಯ ಪಾಲಕಿ ಅಮಾನತಿಗೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಾಗೂ ತಹಸೀಲ್ದಾರ ಮಾಧವಾನಂದ ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಲಾಯಿತು.