ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದು

Contributed by: ranjithkumarks1004@gmail.com|Vijaya Karnataka•
role of rotary organization social changes
ವಿಕ ಸುದ್ದಿಲೋಕ ಅರೇಹಳ್ಳಿ

ಶಿಕ್ಷಣ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಸಂತಸ ತಂದಿದೆ. ಸಮಾಜದ ಅಭಿವೃದ್ಧಿಯಲ್ಲಿರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದ್ದು ಸೇವೆಯೇ ರೋಟರಿ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಜಿಲ್ಲಾರಾಜ್ಯಪಾಲ ರೋ.ಬಿ.ಎಂ. ಭಟ್ ತಿಳಿಸಿದರು.
ಬೇಲೂರು ತಾಲೂಕು ಅರೇಹಳ್ಳಿಯ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಯ ವತಿಯಿಂದ ಜರುಗಿದ ಜಿಲ್ಲಾರಾಜ್ಯಪಾಲರ ಅಧಿಕೃತ ಭೇಟಿ ಕಾರ ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ತಲುಪಿಸುವ ಉದ್ದೇಶದಿಂದ ಸಂಸ್ಥೆ ಹಲವು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರೋಟರಿ ಸಂಸ್ಥೆ ಮಹತ್ವದ ಕೊಡುಗೆ ನೀಡಿದೆ. ಬಾಲವಿಕಾಸ ಕಾರ್ಯಕ್ರಮ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ರೋಟರಿ ಸಂಸ್ಥೆ ವಿಶೇಷ ಆದ್ಯತೆ ನೀಡುತ್ತಿದೆ. ಸಮಾಜದಲ್ಲಿನ ಬಡವರು, ಅಶಕ್ತರು ಹಾಗೂ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಮೂಲಕ ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿಉತ್ತಮ ಬದಲಾವಣೆ ತರಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ರೋ.ಮಹಂತ್ ನಾರ್ವೆ ಮಾತನಾಡಿ, ನಾವು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಈಡೇರಿಸಲು ಅರ್ಥಪೂರ್ಣವಾಗಿ ಕಾರ ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಆರೋಗ್ಯ, ಶಿಕ್ಷಣ, ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕ್ಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಲಾಭ ದೊರಕಬೇಕೆಂಬ ಆಶಯದೊಂದಿಗೆ ಕಾರ ್ಯನಿರ್ವಹಿಸುತ್ತಿದ್ದೇವೆ ಎಂದರು.

ಸಹಾಯಕ ರಾಜ್ಯಪಾಲ ರೋ.ಗಣೇಶ್ ಎಸ್ ., ಪ್ರಾಂತೀಯ ರಾಯಭಾರಿ ರೋ.ವೀರೇಂದ್ರ ಕುಮಾರ್ ಎ.ಡಿ., ಖಜಾಂಚಿ ರೋ.ರಘುನಂದನ್ ಆರ್ ., ಕಾರ ್ಯದರ್ಶಿ ರೋ.ವಿಜಯ್ ಎಂ.ಎಸ್ ., ಹಾಗೂ ರೋಟರಿ ಸಂಸ್ಥೆಯ ಎಲ್ಲಾಪದಾಧಿಕಾರಿಗಳು ಇದ್ದರು.

ಚಿತ್ರ ಸುದ್ದಿ:

ಬೇಲೂರು ತಾಲೂಕು ಅರೇಹಳ್ಳಿಯ ರೋಟರಿ ಭವನದಲ್ಲಿರೋಟರಿ ಸಂಸ್ಥೆಯ ವತಿಯಿಂದ ಜರುಗಿದ ಜಿಲ್ಲಾರಾಜ್ಯಪಾಲರ ಅಧಿಕೃತ ಭೇಟಿ ಕಾರ ್ಯಕ್ರಮವನ್ನು ಜಿಲ್ಲಾರಾಜ್ಯಪಾಲ ರೋ.ಬಿ.ಎಂ.ಭಟ್ ಉದ್ಘಾಟಿಸಿದರು.