** ಉಡುಪಿ ಚೇಂಬರ್ ವತಿಯಿಂದ ಮಾಹಿತಿ ಕಾರ್ಯಾಗಾರ

Contributed by: sgkurya@gmail.com|Vijaya Karnataka•
udupi chamber successfully conducts information workshop
ವಿಕ ಸುದ್ದಿಲೋಕ ಉಡುಪಿ

ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿ್ರ ವತಿಯಿಂದ ಮಾಹಿತಿ ಕಾರ್ಯಾಗಾರವು ಮಣಿಪಾಲ್ ವ್ಯಾಲಿಯು ಕಂಟ್ರಿ ಕ್ಲಬ್ ನಲ್ಲಿ ಬುಧವಾರ ನಡೆಯಿತು.
ಉಡುಪಿ ಲೆಕ್ಕ ಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ಗಣೇಶ್ ವೈ ಮಾತನಾಡಿ, ಕಂಪನಿಯ ವ್ಯಾಪಾರ ವಹಿವಾಟಿನಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಹಾಗೂ ಮಾಲೀಕರ, ಅಧಿಕಾರಿಗಳ ಜವಾಬ್ದಾರಿ, ಲೆಕ್ಕ ಪತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಸಾಫ್ಟ್ ಲಿಂಕ್ ಸಂಸ್ಥೆ ವತಿಯಿಂದ ಟ್ಯಾಲಿ ಬಗ್ಗೆ ಗಣೇಶ್ ತಲಪಾಡಿ ಹಾಗೂ ಫ್ರಾಂಕ್ಲಿನ್ ವಿಶೇಷÜ ಮಾಹಿತಿ ನೀಡಿದರು. ಚೇಂಬರ್ ನ ಮಾಸಿಕ ಮ್ಯಾಗಜಿನ್ ಪತ್ರಿಕೆಯನ್ನು ಸಂಸ್ಥೆಯ ಅಧ್ಯಕ್ಷ ನಟರಾಜ್ ಪ್ರಭು ಬಿಡುಗಡೆಗೊಳಿಸಿದರು.

ಉಪಾಧ್ಯಕ್ಷ ಡಾ. ವಿಜಯೀಂದ್ರ ವಸಂತ ರಾವ್ , ಗೌರವ ಕಾರ್ಯದರ್ಶಿ ಮೊಹಮ್ಮದ್ ಸಮೀರ್ , ಖಜಾಂಚಿಗಳಾದ ಕೆ. ವಿನೋದ್ ಪೈ ಹಾಗೂ ಮ್ಯಾಗಜಿನ್ ಸಂಪಾದಕ ಡಾ. ವಿಲಾಸ್ ಪೈ ಉಪಸ್ಥಿತರಿದ್ದರು.

ಜಂಟಿ ಕಾರ್ಯದರ್ಶಿ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ಕಾರ್ಯಕ್ರಮ ನಿರೂಪಿಸಿದರು. ಯುಸಿಸಿಐ ನಿರ್ದೇಶಕ ನಾಗರಾಜ್ ಹೆಬ್ಬಾರ್ , ಅತುಲ್ ಭಕ್ತ, ಶ…್ರಶ್ರೀಪತಿ ಭಟ್ , ಸಂತೋಷ್ ಶೆಟ್ಟಿ ಸಹಕರಿಸಿದರು.

(ಫೋಟೊ ಫೈಲ…: 13ಯು ಯುಸಿ: ಚೇಂಬರ್ ನ ಮಾಸಿಕ ಸಂಚಿಕೆಯನ್ನು ಸಂಸ್ಥೆಯ ಅಧ್ಯಕ್ಷ ನಟರಾಜ್ ಪ್ರಭು ಬಿಡುಗಡೆಗೊಳಿಸಿದರು.