ರೋಟರಿ ಮಂಗಳೂರು ಸೆಂಟ್ರಲ್ ಮತ್ತು ರೋಟರಾರ ಯಕ್ಟ್ ಮಂಗಳೂರು ಸಿಟಿ ಆಶ್ರಯದಲ್ಲಿ26ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ನ.22ರಂದು ಉರ್ವದ ಕೆನರಾ ಹೈಸ್ಕೂಲ್ ನಲ್ಲಿನಡೆಯಲಿದೆ ಎಂದು ಚಿನ್ನರ ಉತ್ಸವದ ಚೇರ್ ಮನ್ , ಪಿಡಿಜಿ ಎಂಡಿ ಡಾ.ಬಿ. ದೇವದಾಸ್ ರೈ ಹೇಳಿದರು.ಅವರು ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಬೆಳಗ್ಗೆ 9ಕ್ಕೆ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಜಿಲ್ಲೆ3181ರ ವಲಯ 2ರ ಮಾಜಿ ಸಹಾಯಕ ಗವರ್ನರ್ ರಾಜೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬಿ.ಎನ್ .ಇ.ಆರ್ . ರವೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲೆಯ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳ ಸುಮಾರು 434 ವಿದ್ಯಾರ್ಥಿಗಳು ಕ್ರೀಡಾ, ಮನೋರಂಜನಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಭಾಗವಹಿಸಲಿದ್ದಾರೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರೋಟರಿ ಜಿಲ್ಲೆ3181ರ 2026-27ನೇ ಸಾಲಿನ ಮಾಜಿ ಗವರ್ನರ್ ಎಂ.ಡಿ. ಪ್ರಕಾಶ್ ಕಾರಂತ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಉತ್ತಮ ಸರ್ವಾಂಗೀಣ ಪ್ರದರ್ಶನ ನೀಡಿದ ಆರೈಕೆ ಕೇಂದ್ರಕ್ಕೆ ಪ್ರಶಸ್ತಿ ಫಲಕ ನೀಡಲಾಗುತ್ತದೆ. 1996ರಿಂದ ನಿರಂತರವಾಗಿ ಈ ಉತ್ಸವ ಆಯೋಜಿಸಲಾಗುತ್ತಿದ್ದು, ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದು, ಅವರಲ್ಲಿಕ್ರೀಡಾ ಮನೋಭಾವ ಬೆಳೆಸುವುದು ಹಾಗೂ ಸಂತಸ ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬಿ.ಎನ್ .ಇ.ಆರ್ . ರವೀಂದ್ರ, ಸೆಕ್ರೆಟರಿ ಜಾಕ್ಸನ್ ಸಲ್ಡಾನ, ಭಾಸ್ಕರ ರೈ ಕಟ್ಟ, ರೋಟರಾರ ಯಕ್ಟ್ನ ಹರ್ಷ, ರಕ್ಷಣ್ ಹಾಗೂ ವಸಂತ ವಿ. ಮಲ್ಯ ಉಪಸ್ಥಿತರಿದ್ದರು.