ಎಸ್ ಐ ಶಾಂತ ಕುಮಾರಿ ಬೇಸರ | ಕೃಷ್ಣರಾಜನಗರ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿವಿಕ ಸುದ್ದಿಲೋಕ ಕೃಷ್ಣರಾಜನಗರ
ಮಹಿಳೆಯರು ಎಲ್ಲಾಕ್ಷೇತ್ರದಲ್ಲೂಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರೂ ಸಹ ಪುರುಷರಿಗೆ ಸಮಾನವಾದ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಎಸ್ ಐ ಶಾಂತ ಕುಮಾರಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿಮಾತನಾಡಿದರು.
‘‘ಮಹಿಳೆ ಒಂದು ಶಕ್ತಿಯಾಗಿದ್ದು , ಅವರಿಲ್ಲದೇ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲ, ಇಂತಹ ಸಂದರ್ಭದಲ್ಲೂಮಹಿಳೆ ಹಲವು ಶೋಷಣೆಗಳಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯ ಕಾನೂನು ಅರಿವು ಪಡೆದುಕೊಳ್ಳಬೇಕು,’’ ಎಂದರು.
‘‘ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ದಾರಿ ತಪ್ಪುವುದಿಲ್ಲ. ಇದಕ್ಕೆ ತಂದೆ ತಾಯಿಯ ನಡವಳಿಕೆ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳು ಕಾರಣವಾಗುತ್ತೇವೆ,’’ ಎಂದು ಹೇಳಿದರು.
‘‘ಬಾಲ್ಯ ವಿವಾಹವನ್ನು ಮಾಡಬಾರದು. ಜತೆಗೆ ಮೊಬೈಲ್ ಬಳಕೆ ಹಾಗೂ ಧಾರಾವಾಹಿ ವೀಕ್ಷಣೆ ಮಾಡುವುದನ್ನು ಕಡಿಮೆ ಮಾಡಬೇಕು,’’ಎಂದು ಸಲಹೆ ನೀಡಿದರು.
ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಟ್ಟದ ಜಯದೇವಿತಾಯಿ, ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾನಿರ್ದೇಶಕಿ ಮಮತಾರಾವ್ , ಜಿಲ್ಲಾಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಕೆ.ಎಸ್ .ನಾಗರತ್ನಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಸಿ.ಈ.ತ್ರಿವೇಣಿ, ಪೂರ್ಣಿಮಾ, ಚಂದ್ರಶೇಖರ್ , ತಾಲೂಕು ಯೋಜನಾಧಿಕಾರಿ ಕೆ.ಎಸ್ .ಸದಾನಂದ್ , ಜ್ಞಾನವಿಕಾಸ ಸಮನ್ವಯಾಧಿಕಾರಿ ಅನುಷಾ, ಕೃಷಿ ಮೇಲ್ವಿಚಾರಕ ಮಹದೇವಸ್ವಾಮಿ, ಮೇಲ್ವಿಚಾರಕರಾದ ಶಶಿಕಲಾ,ರಾಣಿ, ರಜನಿಕಾಂತ್ , ಸೋಮಶೇಖರ್ , ಲಲಿತಾ, ನವೀನ, ದರ್ಶನ್ , ನೇತ್ರಾವತಿ, ಸುನೀತ ರಾಮೇಗೌಡ ಇದ್ದರು.
ಕೃಷ್ಣರಾಜನಗರ ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಯದೇವಿ ತಾಯಿ ಉದ್ಘಾಟಿಸಿದರು.