ಹಿಂದುಳಿದ ವರ್ಗಗಳಲ್ಲಿರುವ ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮರ್ಪಕ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿಒಬಿಸಿ ಒಳ ಮೀಸಲು ಜಾರಿಗೊಳಿಸಬೇಕು ಎಂದು ಒಬಿಸಿ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಅನೇಕ ಸಣ್ಣ ಸಮುದಾಯಗಳು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಸೂಕ್ತ ಅವಕಾಶಗಳಿಂದ ವಂಚಿತವಾಗಿವೆ. ವಿಶ್ವಕರ್ಮ, ಬಡಗಿ, ಅಕ್ಕಸಾಲಿಗ, ಕಂಬಾರ, ಕುಂಬಾರ, ಮಡಿವಾಳ, ಹಡಪದ, ಅಗಸ, ಗಾಣಿಗ ಸೇರಿದಂತೆ ಕಾಯಕ ಸಮುದಾಯಗಳ ಹಿಂದುಳಿತ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
‘‘ಒಬಿಸಿ ವರ್ಗದೊಳಗಿನ ಮೀಸಲಾತಿ ಹಂಚಿಕೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿತತೆ ಮತ್ತು ಜನಸಂಖ್ಯೆಯ ಆಧಾರದಲ್ಲಿನ್ಯಾಯಯುತ ಅವಕಾಶ ಕಲ್ಪಿಸಬೇಕು. ಮೀಸಲಾತಿ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದನ್ನು ಅಂಕಿ-ಅಂಶಗಳ ಮೂಲಕ ಪರಿಶೀಲಿಸಬೇಕು. ಕೇವಲ ಘೋಷಣೆಗಳಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ; ಸಣ್ಣ ಸಮುದಾಯಗಳಿಗೂ ಸಮಾನ ಅವಕಾಶ ದೊರೆತಾಗ ಮಾತ್ರ ಸಂವಿಧಾನದ ಆಶಯ ಸಾಕಾರವಾಗಲಿದೆ,’’ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ , ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ್ , ಸತೀಶ, ರಾಜ್ಯ ಮಾಧ್ಯಮ ಪ್ರಮುಖ ಕೊಟ್ರೇಶ್ , ಜಿಲ್ಲಾಧ್ಯಕ್ಷರು ಒಬಿಸಿ ಮೋರ್ಚಾ ಬಿ.ಆರ್ . ಜಯಣ್ಣ, ಮಾಜಿ ಹುಡಾ ಅಧ್ಯಕ್ಷರು ನವಿಲೇ ಅಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಂದ್ರ, ಮಾಧ್ಯಮ ವಕ್ತಾರರಾದ ವೇದಾವತಿ ಬಿ. ಇತರರಿದ್ದರು.