ದೇಶಪ್ರೇಮ ಅಳವಡಿಸಿಕೊಳ್ಳಿ

Contributed by: vkhnataraj@gmail.com|Vijaya Karnataka•
patriotism and discipline a new wave in the youth community
ದೇಶಪ್ರೇಮ ಅಳವಡಿಸಿಕೊಳ್ಳಿ

ಸ್ಯಾಮ್ ಭಾರತ್ ಡಿಫೆನ್ಸ್ ಅಕಾಡೆಮಿಯಲ್ಲಿರಾಜ್ಯೋತ್ಸವ
ವಿಕ ಸುದ್ದಿಲೋಕ ಹುಣಸೂರು

ಸೇನೆಗೆ ಸೇರುವ ಮಹತ್ವಾಕಾಂಕ್ಷೆ ಹೊಂದಿರುವ ಯುವ ಸಮುದಾಯ ದೇಶಪ್ರೇಮ, ಶಿಸ್ತು, ಸಮಯ ಪ್ರಜ್ಞೆ, ಶ್ರದ್ಧೆ, ಕಠಿಣ ಪರಿಶ್ರಮ ಅಳವಡಿಸಿಕೊಂಡಲ್ಲಿಮಾತ್ರ ಸೇನೆಗೆ ಸೇರಲು ಸಾಧ್ಯ,’’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.

ತಾಲೂಕಿನ ಬಿಳಿಕೆರೆ ಹೋಬಳಿಯ ಶ್ರವಣಹಳ್ಳಿಯ ಸ್ಯಾಮ್ ಭಾರತ್ ಡಿಫೆನ್ಸ್ ಟ್ರಸ್ಟ್ (ಸೈನಿಕ್ ಅಕಾಡೆಮಿ)ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದಲ್ಲಿಕನ್ನಡಾಂಬೆ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆಗೈದು, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘‘ಸೈನ್ಯಕ್ಕೆ ಸೇರುವವರಿಗಾಗಿ ತಾಲೂಕಿನಲ್ಲಿತೆರೆದಿರುವ ಸೈನಿಕ್ ಅಕಾಡೆಮಿಯಿಂದ ಸಹಕಾರಿಯಾಗಲಿದೆ. ಸೂಕ್ತ ತರಬೇತಿ ಪಡೆದು ಕೊಳ್ಳಿ, ಇಲ್ಲಿಕಠಿಣ ಅಭ್ಯಾಸದಲ್ಲಿತೊಡಗಿಸಿಕೊಂಡರೆ ಸುಲಭವಾಗಿ ಸೇನೆ ಸೇರಬಹುದಾಗಿದೆ. ಇದಕ್ಕಾಗಿ ಆತ್ಮವಿಶ್ವಾಸ ಅತ್ಯವಶ್ಯ, ಇಲ್ಲಿತರಬೇತಿ ಪಡೆದು ಸೇನೆ, ಪೊಲೀಸ್ , ಅಗ್ನಿಶಾಮಕದಳ ಸೇರಿದಂತೆ ಇತರೆಡೆಯೂ ಹುದ್ದೆಗಳಿಸಲು ನೆರವಾಗಲಿದ್ದು, ಆಸಕ್ತಿಯಿಂದ ತರಬೇತಿ ಪಡೆದುಕೊಳ್ಳುವಂತೆ,’’ಸಲಹೆ ನೀಡಿದರು.

ಸಂಸ್ಥೆಯ ಸಂಸ್ಥಾಪಕರಾದ ಮಾಜಿ ಎನ್ .ಎಸ್ .ಜಿಯ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಿ.ಎಂ.ಶ್ರೀಧರ ಮಾತನಾಡಿ,‘‘ ಅಕಾಡೆಮಿಯಲ್ಲಿತರಬೇತಿಯೊಂದಿಗೆ ರಾಷ್ಟ್ರೀಯ-ನಾಡ ಹಬ್ಬ, ದಾರ್ಶನಿಕರ ಜಯಂತಿಯನ್ನು ಆಚರಿಸಲಾಗುತ್ತಿದೆ,’’ ಎಂದರು.

ವಿದ್ಯಾರ್ಥಿಗಳು ಮಿಲಿಟರಿ ಶೈಲಿಯ ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರು. ನಾಡಗೀತೆ ಗಾಯನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಿದರು.

ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿವಿಜೇತ ತಂಡಗಳು ಹಾಗೂ ಆಟಗಾರರಿಗೆ ಗಣ್ಯರು ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮಿ ಹರವೆ ಶ್ರೀಧರ್ , ಭರತ್ ಕುಮಾರ್ (ಕುಪ್ಪೆ), ಪ್ರಕಾಶ್ ತುಳಸಿಕೊಪ್ಪಲು, ಬಿ.ಉಮೇಶ್ , ಎಸ್ ಎಎಂ ಸಂಸ್ಥೆಯ ಉಪಾಧ್ಯಕ್ಷ ಅನಿತಾ ಶ್ರೀಧರ್ , ಶಿಕ್ಷಕರಾದ ಸ್ವಾಮಿಗೌಡ, ಮಂಜುಳಾ, ಶಿವಾನಿ, ಸಹನಾ, ಶ್ರೀಲಕ್ಷ್ಮಿ, ಕೋಚ್ ಸಿಂಗ್ರಿಗೌಡ, ಡ್ರಿಲ್ ಇನ್ ಸ್ಟ್ರಕ್ಟರ್ ರಾಜೇಶ್ , ಪ್ರಕಾಶ್ , ಸ್ಟುಡಿಯೋದ ದಿಲೀಪ್ ಕುಮಾರ್ , ಆಡಳಿತ ಮಂಡಳಿಯ ಸದಸ್ಯರಾದ ಅರುಣ್ , ಶಿವಾನಿ, ದಿವ್ಯಾ, ಕೃಷ್ಣ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

15ಎಚ್ ಯುಎನ್ -1

ಹುಣಸೂರು ತಾಲೂಕು ಶ್ರವಣಹಳ್ಳಿಯಲ್ಲಿನಡೆದ ರಾಜ್ಯೋತ್ಸವದಲ್ಲಿವಿದ್ಯಾರ್ಥಿಗಳೊಂದಿಗೆ ಶಾಸಕ ಹರೀಶ್ ಗೌಡ, ಸಂಸ್ಥಾಪಕ ಶ್ರೀಧರ್ ಹಾಗೂ ಶಿಕ್ಷಕರಿದ್ದಾರೆ.