* ಜೆಡಿಎಸ್ ಗೆ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿಶಾಸಕಿ ಕರೆಮ್ಮ ಹೇಳಿಕೆವಿಕ ಸುದ್ದಿಲೋಕ ದೇವದುರ್ಗ
‘‘ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ತತ್ತ$್ವ ಸಿದ್ಧಾಂತದಡಿ ಜೆಡಿಎಸ್ ಕೆಲಸ ಮಾಡುತ್ತಿದ್ದು, ಕಾರ್ಯಕರ್ತರು ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದಾರೆ. ಕಾರ್ಯಕರ್ತರೇ ಪಕ್ಷದ ಜೀವಾಳ ಇದ್ದಂತೆ,’’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿಆಯೋಜಿಸಿದ್ದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿಮಾತನಾಡಿದರು. ‘‘ರಾಜ್ಯದಲ್ಲಿಜೆಡಿಎಸ್ ನೇತೃತ್ವದ ಸರಕಾರ ಬರಲು ಕಾರ್ಯಕರ್ತರ ತ್ಯಾಗ, ಪರಿಶ್ರಮ ಕಾರಣ. ದೇವೇಗೌಡರು, ಕುಮಾರಣ್ಣನವರ ಸರಕಾರದಲ್ಲಿಅನೇಕ ಜನಪರ ಕಾರ್ಯಕ್ರಮ ರೂಪಿಸಲಾಗಿದೆ. ರೈತರು, ಕೂಲಿಕಾರರು, ಬಡವರಿಗಾಗಿ ಪಕ್ಷ ಶ್ರಮಿಸಿದೆ. ಜೆಡಿಎಸ್ ನ ಕೊಡುಗೆ ರಾಜ್ಯಕ್ಕೆ ಅಪಾರವಿದೆ. ಹೀಗಾಗಿ ಪಕ್ಷದ ತತ್ತ$್ವಸಿದ್ಧಾಂತವನ್ನು ರೈತರಿಗೆ, ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಕಾರ್ಯಕರ್ತರು ಪಕ್ಷ ಬಲಪಡಿಸಬೇಕು,’’ ಎಂದರು.
ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಬಸವರಾಜ ನಾಡಗೌಡ ಚಿಂಚೋಡಿ, ಗೋವಿಂದರಾಜ್ ನಾಯಕ, ನಾಗರಾಜ ಪಾಟೀಲ್ , ಮಹಾದೇವಪ್ಪಗೌಡ, ಶರಣಪ್ಪ ಬಳೆ ಸೇರಿ ಇತರರಿದ್ದರು.
ಆರ್ ಸಿಎಚ್ 17ಡಿವಿಡಿ03
ದೇವದುರ್ಗದ ಶಾಸಕರ ಕಚೇರಿಯಲ್ಲಿಆಯೋಜಿಸಿದ್ದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿಶಾಸಕಿ ಕರೆಮ್ಮ ಜಿ.ನಾಯಕ ನೇತೃತ್ವದಲ್ಲಿತಾಪಂ ಮಾಜಿ ಸದಸ್ಯ ಬಸವರಾಜ ನಾಡಗೌಡ ಬೆಂಬಲಿಗರು ಪಕ್ಷ ಸೇರ್ಪಡೆಯಾದರು.