ನೌಕರನ ವಿರುದ್ಧ ಕ್ರಮಕ್ಕೆ ಆಗ್ರಹ

Contributed by: prakashamailankote@gmail.com|Vijaya Karnataka•
protest against land acquisition demand action against official
ಬೋವಿಕ್ಕಾನ: ವರ್ಷಗಳಿಂದ ಮುಳಿಯಾರು ಮತ್ತು ಸಮೀಪ ಪ್ರದೇಶದ ಮಕ್ಕಳು ಮತ್ತು ಯುವಕರು ಆಟ ಆಡುತ್ತಿದ್ದ ಸ್ಥಳವನ್ನು ಭೂ ಮಾಫಿಯಾ ಕೈಗೆ ಒಪ್ಪಿಸಲು ಮುಳಿಯಾರು ಗ್ರಾಮ ಪಂಚಾಯತಿಯ ಕಂದಾಯ ಇಲಾಖೆ ನೌಕರ ಒತ್ತಾಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಭೂಮಿ ವಶಪಡಿಸಲು ಅಸಾಧ್ಯವಾದಾಗ ಕೇವಲ ಕಾಗದದ ಸಂಘಟನೆಯ ಬಲದಲ್ಲಿಊರಿನ ಎಲ್ಲಜನರನ್ನು ಅಪಮಾನಿಸುವ ರೀತಿಯಲ್ಲಿಸುದ್ದಿಯನ್ನು ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮುಳಿಯಾರಿನ ಜೋಲಿ ಫ್ರೆಂಡ್ಸ್ ಕ್ಲಬ್ ಒತ್ತಾಯಿಸಿದೆ. ಎಲ್ಲರಿಗೂ ಪ್ರಯೋಜನಕರವಾದ ಈ ಆಟದ ಮೈದಾನವನ್ನು ಇತರರ ಕೈಗೆ ನೀಡಲು ಪ್ರಯತ್ನಿಸಿದ ಕಂದಾಯ ಇಲಾಖೆ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕ್ಲಬ್ ಕಂದಾಯ ಇಲಾಖೆ ಸಚಿವರು ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದೆ.