ಶಿಕ್ಷಣವೇ ಸವಾಂರ್ ಗೀಣ ಬೆಳವಣಿಗೆಗೆ ಅಡಿಪಾಯ

Contributed by: madhugirinews@gmail.com|Vijaya Karnataka•
quality education as the foundation for socio economic development
ಶಿಕ್ಷಣವೇ ಸವಾಂರ್ ಗೀಣ ಬೆಳವಣಿಗೆಗೆ ಅಡಿಪಾಯ

ಶ್ರೀ ಸಿದ್ದಲಿಂಗಸ್ವಾಮೀಜಿ
ವಿಕ ಸುದ್ದಿಲೋಕ ತುಮಕೂರು

ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅವರ ಸವಾಂರ್ ಗೀಣ ಬೆಳವಣಿಗೆ ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಸಿದ್ಧಗಂಗಾ ಶಿಕ್ಷಣ ವಿದ್ಯಾಲಯದ ಅಂತಿಮ ವರ್ಷದ ಬಿಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿದ ಅವರು, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಮಹಾಸ್ವಾಮಿಗಳ ದೂರದೃಷ್ಟಿಯ ಫಲವಾಗಿ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸ್ಥಾಪನೆಯಾದವು. ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ 1972ರಲ್ಲಿಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯ ಆರಂಭಿಸಲಾಯಿತು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಮಹಾರಾಜರು ಸಿದ್ಧಗಂಗಾ ಪ್ರೌಢಶಾಲೆ ಉದ್ಘಾಟಿಸಿರುವುದು ಸಂಸ್ಥೆಯ ಶೈಕ್ಷಣಿಕ ಪರಂಪರೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿದೆ. ಮೈಸೂರು ರಾಜರ ಕೊಡುಗೆ ಸ್ಮರಿಸಬೇಕು ಎಂದರು.

ತುಮಕೂರು ವಿವಿಯ ಕುಲಸಚಿವ ಪ್ರೊ. ಮೋಹನ್ ಮಾತನಾಡಿ, ಶಿಕ್ಷಣವೆಂಬ ಒಂದು ಹಣತೆಯ ಜ್ಯೋತಿಯಿಂದ ಸಾವಿರಾರು ಹಣತೆಗಳ ಜ್ಯೋತಿ ಬೆಳಗಬೇಕು. ಜೀವನದಲ್ಲಿಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಭಾರತದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಶ್ರಮಿಸಬೇಕು ಎಂದರು.

ಪ್ರಿನ್ಸಿಪಾಲ್ ಡಾ. ಪಿ.ಶಂಭುಲಿಂಗಸ್ವಾಮಿ, ಸಹ ಪ್ರಾಧ್ಯಾಪಕ ಡಾ.ಕುಮಾರ್ ಕೆ., ಡಾ. ಜ್ಯೋತಿ ಬಿ.ಪಂತ್ , ಡಾ. ನಟರಾಜ್ ಆರ್ ., ಸತೀಶ್ ಎಸ್ ., ಮಮತಾ ಎಂ. ಹಾಜರಿದ್ದರು.

17ಕೆಜಿಎಚ್ 2: ತುಮಕೂರು ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.