200 ಪ್ರತಿ ಸ್ಪಾನ್ಸರ್ ... ಭೀಷ್ಮಾಚಾರ್ಯರ ಇತಿಹಾಸ ತಿಳಿಯಿರಿ

Contributed by: mahanteshsangam31@gmail.com|Vijaya Karnataka•
the history of bhishmacharya 200 sponsors and the importance of teachings
ಅಂಬಿಗರ ಚೌಡಯ್ಯ ದೇವಾಲಯ ಉದ್ಘಾಟನೆ | ಮಾಜಿ ಸಚಿವ ಎಸ್ .ಕೆ.ಬೆಳ್ಳುಬ್ಬಿ ಸಲಹೆ

ಭೀಷ್ಮಾಚಾರ್ಯರ ಇತಿಹಾಸ ತಿಳಿಯಿರಿ
ವಿಕ ಸುದ್ದಿಲೋಕ ಬಸವನಬಾಗೇವಾಡಿ

‘‘ರಾಜನೀತಿ ಬೋಧಿಸಿದ ಭೀಷ್ಮಾಚಾರ್ಯರ ಇತಿಹಾಸ ಇಂದಿನ ಜನ ತಿಳಿದುಕೊಳ್ಳಬೇಕಾದ ಮತ್ತು ತಿಳಿಸಬೇಕಾದ ಅಗತ್ಯತೆ ತುಂಬಾ ಇದೆ,’’ ಎಂದು ಮಾಜಿ ಸಚಿವ ಎಸ್ .ಕೆ.ಬೆಳ್ಳುಬ್ಬಿ ಹೇಳಿದರು.

ಪಟ್ಟಣದಲ್ಲಿಸೋಮವಾರ ರಾತ್ರಿ ನಡೆದ ಬಸವಾದಿ ಶರಣ ಅಂಬಿಗರ ಚೌಡಯ್ಯನವರ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ, ಕಳಸಾರೋಹಣ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯನವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ನೇರ ನುಡಿಯ ಅವರ ವಚನಗಳನ್ನು ಅರಗಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಅಂಬಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವುದು ತುಂಬಾ ಒಳ್ಳೆಯದಾಗಿದೆ. ಸರಕಾರ ನಾನಾ ಸೌಲಭ್ಯಗಳನ್ನು ಈ ಸಮಾಜಕ್ಕೆ ನೀಡಬೇಕು,’’ ಎಂದರು.

ಹಾವೇರಿ ಜಿಲ್ಲೆಚೌಡಯ್ಯದಾನಪುರದ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶಾಂತಭೀಷ್ಮಚೌಡಯ್ಯ ಮಹಾಸ್ವಾಮೀಜಿ ಮಾತನಾಡಿ, ‘‘ಮೌಢ್ಯತೆ ಬಿತ್ತುವವರನ್ನು ಎಂದಿಗೂ ನಂಬಬೇಡಿ. ಬಸವಾದಿ ಶರಣರ ಬಗ್ಗೆ ತಿಳಿಯದೇ ಹೋದರೆ ಅದು ಶರಣ ದ್ರೋಹವಾಗುತ್ತದೆ. ಶಿವಯೋಗ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಪುರುವಂತಿಕೆ ಬಗ್ಗೆ ಹೇಳಿದವರು ಅಂಬಿಗ ಚೌಡಯ್ಯನವರ ಪುತ್ರ,’’ ಎಂದರು.

‘‘ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಬೇರೆ ರಾಜ್ಯಗಳ ಶರಣರು ಬಂದರೂ ಅವರೆಲ್ಲರೂ ಅಚ್ಚ ಕನ್ನಡದಲ್ಲಿಯೇ ವಚನಗಳನ್ನು ಬರೆದಿದ್ದಾರೆ. ವಿಶ್ವಗುರು ಬಸವಣ್ಣನವರನ್ನು ಇನ್ನೂ ಪ್ರಪಂಚಕ್ಕೆ ಪರಿಚಯಿಸಬೇಕಿದೆ. ಪ್ರಭುದೇವರ ಪ್ರಶ್ನೆಗಳಿಗೆ ಚೌಡಯ್ಯನವರು ಸಮರ್ಪಕ ಉತ್ತರ ನೀಡುತ್ತಿದ್ದರು. ಪ್ರತಿ ವರ್ಷ ನಮ್ಮ ಪೀಠದಲ್ಲಿನಡೆಯುವ ಚೌಡಯ್ಯನವರ ಉತ್ಸವದಲ್ಲಿವಚನ ಗ್ರಂಥ ಕಟ್ಟುಗಳನ್ನು ಮೆರವಣಿಗೆ ಮಾಡಲಾಗುತ್ತದೆ,’’ ಎಂದರು.

ಶರಣು ಬಸ್ತಾಳ ಉಪನ್ಯಾಸ ನೀಡಿ, ‘‘ಚೌಡಯ್ಯನವರು ಬರೆದ ವಚನಗಳು ಕಠಿಣವಾಗಿವೆ. ಅವನ್ನು ಓದಿದರೆ ಅದೊರೊಳಗಿನ ತಿರುಳು ಅರಿವಿಗೆ ಬರುತ್ತದೆ,’’ ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಪ್ಪುಗೌಡ ಪಾಟೀಲ ಮನಗೂಳಿ, ಸಂಗನಗೌಡ ಚಿಕ್ಕೊಂಡ ಮಾತನಾಡಿದರು. ಚೌಡಯ್ಯ ಸಮಾಜದ ಮುಖಂಡ ರಾಜು ಮುಳವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಚಯ್ಯ ಸ್ವಾಮೀಜಿ, ಶಿವಾನಂದ ಈರಕಾರ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಸುರೇಶ ಹಾರಿವಾಳ, ಗಂಗಾಧರ ಕುಂಟೋಜಿ, ನೀಲು ನಾಯಕ, ಬಸವರಾಜ ಬಿಜಾಪುರ, ರುದ್ರಪ್ಪ ಅಂಗಡಿ, ಪರಶುರಾಮ ಅಡಗಿಮನಿ, ಮುತ್ತಪ್ಪ ಉಕ್ಕಲಿ, ಪರಶುರಾಮ ಜಮಖಂಡಿ, ಮಲ್ಲೇಶಿ ಕಡಕೋಳ, ಹನುಮಂತ ಕಾಮನಕೇರಿ ಹಾಗೂ ಕೊಟ್ರೇಶ ಹೆಗಡ್ಯಾಳ, ಪ್ರಕಾಶ ಕೊಂಡಿಕೊಪ್ಪದವರ, ಚಂದ್ರಶೇಖರ ಹದಿಮೂರ ಸೇರಿ ಇತರರಿದ್ದರು.

--

ಇಷ್ಟಲಿಂಗ ಪೂಜೆಯೊಂದಿಗೆ ದೇಗುಲ ಉದ್ಘಾಟನೆ

ಅಂಬಿಗರ ಚೌಡಯ್ಯ ದೇವಸ್ಥಾನವನ್ನು ಹೋಮ ಹವನವಿಲ್ಲದೆ ಇಷ್ಟಲಿಂಗ ಪೂಜಾ ಕಾರ್ಯದೊಂದಿಗೆ ಉದ್ಘಾಟಿಸಿದ್ದೇವೆ ಎಂದು ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಬೆಳಗ್ಗೆ ದೇವಸ್ಥಾನದಲ್ಲಿಇಷ್ಟಲಿಂಗ ಧಾರಣೆ, ರುದ್ರಾಕ್ಷಿ ಕಟ್ಟುವ ಕಾರ್ಯ ನಡೆಯಿತು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಾನಾ ಮಹನೀಯರನ್ನು ಸನ್ಮಾನಿಸಲಾಯಿತು. 40 ವರ್ಷದ ಹಿಂದೆ ಹಾಲಿ ದೇವಸ್ಥಾನದ ಖಾಲಿ ಜಾಗದಲ್ಲಿಅಂಬಿಗರ ಚೌಡಯ್ಯ ವೃತ್ತ ಎಂದು ಫಲಕ ನಿಲ್ಲಿಸಿದ್ದ ದಿ.ಚೌಡಪ್ಪ ಅವರನ್ನು ಸ್ಮರಿಸಲಾಯಿತು.

17ನವೆಂಬರ್ 1 ಫೋಟೊ (ಅಂಬಿಗ)

ಬಸವನಬಾಗೇವಾಡಿಯಲ್ಲಿನಡೆದ ಅಂಬಿಗರ ಚೌಡಯ್ಯನವರ ನೂತನ ದೇವಾಲಯ ಉದ್ಘಾಟನೆ, ಧರ್ಮಸಭೆಯನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು.