ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಜಾರಿಗೊಂಡಿರುವ ನೂತನ ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ನೇಮಕಗೊಂಡಿರುವ ಗೌರವಧನ ಹಾಗೂ ಹೊರ ಗುತ್ತಿಗೆಯಡಿ ನೌಕರರಿಗೆ ನಾಲ್ಕು ತಿಂಗಳಿಂದ ವೇತನ ಬಿಡುಗಡೆಯಾಗದೆ ಪರದಾಡುವಂತಾಗಿದೆ.
ಮನರೇಗಾ ಯೋಜನೆಯ ಮುಂದುವರಿದ ಭಾಗವಾಗಿ ಕೆಲವು ಮಾರ್ಪಾಡುಗಳೊಂದಿಗೆ ಅನುಷ್ಠಾನಗೊಂಡಿರುವ ವಿಕಸಿತ ಭಾರತದ ಪರಿಕಲ್ಪನೆಯ ವಿಬಿಜಿ ರಾಮ್ ಜಿ (ವಿಕಸಿತ ಭಾರತ್ ಗ್ಯಾರಂಟಿ, ರೋಜ…ಗಾರ್ ಅಂಡ್ ಅಜೀವಿಕ ಮಿಷನ್ ) ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯಾಗಿದೆ. ಆದರೆ, ಈ ಹೊಸ ವ್ಯವಸ್ಥೆಗೆ ಪರಿವರ್ತನೆಯಾಗುವ ಪ್ರಕ್ರಿಯೆಯಲ್ಲಿಉಂಟಾಗಿರುವ ತಾಂತ್ರಿಕ ತೊಡಕುಗಳು, ಯೋಜನೆ ಯಶಸ್ಸಿಗೆ ತಳಮಟ್ಟದಲ್ಲಿಶ್ರಮಿಸುತ್ತಿರುವ ನೌಕರರಿಗೆ ವೇತನ ಬಿಡುಗಡೆ ವಿಚಾರದಲ್ಲಿವಿಳಂಬವಾಗುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪರಿವರ್ತಿತ ಹೊಸ ಯೋಜನೆಯಡಿ ಈ ಹಿಂದೆ ಮನರೇಗಾದಲ್ಲಿಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ಕಾಯಂ ಸಿಬ್ಬಂದಿಯೊಂದಿಗೆ ಗೌರವಧನ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ನೌಕರರ ಸೇವೆಯನ್ನು ಮುಂದುವರಿಸಲಾಗಿದೆ.
ನೌಕರರ ಅನುಭವ ಹಾಗೂ ಸೇವಾ ಮುಂದುವರಿಕೆ ಉತ್ತಮ ನಿರ್ಧಾರವಾಗಿದೆ. ಆದರೂ, ತಾಂತ್ರಿಕವಾಗಿ ಹೊಸ ಯೋಜನೆಯ ನಿಯಮಗಳಿಗೆ ಅನುಗುಣವಾಗಿ ಇವರ ಮರು ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವಲ್ಲಿತಡವಾಗಿರುವುದು ಹಾಗೂ ಇದೀಗ ಅವರಿಗೆ ವೇತನ ಬಿಡುಗಡೆಯಲ್ಲೂವಿಳಂಬ ಮಾಡುತ್ತಿರುವುದು ನೌಕರರಲ್ಲಿಸಹಜವಾಗಿಯೇ ಆತಂಕ ಮೂಡಿಸಿದೆ.
ಮಾಹಿತಿ ಪ್ರಕಾರ, ಕಳೆದ ಜುಲೈನಿಂದ ಈವರೆವಿಗೂ ಈ ಗೌರವಧನ ಹಾಗೂ ಹೊರ ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆಯಾಗಿಲ್ಲ. ಸಂಸಾರ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ನಿತ್ಯದ ಜೀವನ ನಿರ್ವಹಣೆಗಾಗಿ ಸಂಪೂರ್ಣವಾಗಿ ಈ ವೇತನವನ್ನೇ ನೆಚ್ಚಿಕೊಂಡಿರುವ ನೌಕರರು ಈಗ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
=====
140 ರಿಂದ 150 ನೌಕರರ ಸಂಕಷ್ಟ
ಜಿಲ್ಲೆಯಾದ್ಯಂತ ತಾಲೂಕುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿನಾನಾ ಹಂತ ಮತ್ತು ವರ್ಗಗಳಲ್ಲಿಒಟ್ಟು 140 ರಿಂದ 150 ನೌಕರರು ಗೌರವಧನ ಹಾಗೂ ಹೊರಗುತ್ತಿಗೆಯಡಿ ಈ ಯೋಜನೆಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಈ ಕ್ಷೇತ್ರ ಮಟ್ಟದ ಸಿಬ್ಬಂದಿ ಪಾತ್ರವೇ ಹಿರಿದು. ತಳಮಟ್ಟದಲ್ಲಿಹಗಲಿರುಳು ಕಷ್ಟಪಟ್ಟು ದುಡಿಯುವ ಇಂತಹ ಸಿಬ್ಬಂದಿಗೆ ಸಕಾಲದಲ್ಲಿವೇತನ ಸಿಗದಿರುವುದು ಅವರ ನೈತಿಕ ಸ್ಥೆ ೖರ್ಯವನ್ನು ಕುಗ್ಗಿಸುತ್ತಿದೆ.
ಕೇವಲ ವೇತನ ವಿಳಂಬವಷ್ಟೇ ಅಲ್ಲದೆ, ಹೊಸ ಯೋಜನೆಯಡಿ ಆರಂಭಿಕ ದಿನಗಳಲ್ಲಿಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಕಾಡುತ್ತಿವೆ. ಸಾಫ್ಟ್ ವೇರ್ ಅಪ್ ಡೇಚ್ , ಪೋರ್ಟಲ್ ಬದಲಾವಣೆ, ಹಳೆಯ ಹಾಗೂ ಹೊಸ ಮಾರ್ಗಸೂಚಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಗಳನ್ನು ಸಹ ನೌಕರರು ಎದುರಿಸಬೇಕಾಗಿದೆ. ಹಾಗಾಗಿ ಹಿರಿಯ ಅಧಿಕಾರಿಗಳು ಇವುಗಳನ್ನು ಹಂತ ಹಂತವಾಗಿ ಬಗೆಹರಿಸಬೇಕಾಗಿದೆ ಎಂಬ ಒತ್ತಾಯ ಕೇಳಿ ಬಂದಿದೆ.
===
ತಡೆಹಿಡಿಯಲಾಗಿರುವ ನಾಲ್ಕು ತಿಂಗಳ ಸಂಪೂರ್ಣ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ಹೊಸ ಯೋಜನೆಯಡಿ ಬಾಕಿ ಉಳಿದಿರುವ ಎಲ್ಲಾತಾಂತ್ರಿಕ ತೊಡಕುಗಳನ್ನು ಶೀಘ್ರ ಇತ್ಯರ್ಥಪಡಿಸಿ, ಮುಂದಿನ ದಿನಗಳಲ್ಲಿವೇತನ ಪಾವತಿ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
- ಮಹೇಶ್ ಗಾಳೀಪುರ, ಮುಖಂಡರು, ಎಸ್ ಡಿಪಿಐ, ಚಾಮರಾಜನಗರ
=====
ವೇತನ ವಿಳಂಬವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕುರಿತು ಜಿಲ್ಲಾಪಂಚಾಯಿತಿ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು. ಸಮಸ್ಯೆ ಇದ್ದರೆ ಆದಷ್ಟು ಬೇಗ ವೇತನ ಪಾವತಿಗೆ ಕ್ರಮ ವಹಿಸಲಾಗುವುದು.