ಸ್ವಚ್ಛತಾ ಕಾರ್ಯದ ವೇಳೆ ಸಕ್ಕರೆ ಪಾಕದ ಕಂಟೈನರ್ ಗೆ ಕಾಲು ಜಾರಿ ಬಿದ್ದು ಗುತ್ತಿಗೆ ಕಾರ್ಮಿಕ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕು ಅಣ್ಣೂರು ಗ್ರಾಮದ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ(ಚಾಂಶುಗರ್ಸ್)ಯಲ್ಲಿಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿಕುಟುಂಬದವರು ಮಂಗಳವಾರ ಮೃತದೇಹದೊಂದಿಗೆ ಪ್ರತಿಭಟಿಸಿದ ಪರಿಣಾಮ ಚಾಂಶುಗರ್ಸ್ ಆಡಳಿತ ಮಂಡಳಿ 22 ಲಕ್ಷ ರೂ. ಪರಿಹಾರ ಘೋಷಿಸಿದೆ.
ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಗೊರವನಹಳ್ಳಿ ಗ್ರಾಮದ ರತ್ನಮ್ಮ-ಜಯರಾಮು ದಂಪತಿ ಪುತ್ರ ಅರುಣ್ ಕುಮಾರ್ (23) ಮೃತ ಕಾರ್ಮಿಕ.
‘‘ಐದು ವರ್ಷಗಳಿಂದ ಚಾಂಶುಗರ್ಸ್ನಲ್ಲಿಗುತ್ತಿಗೆ ಕಾರ್ಮಿಕನಾಗಿದ್ದ ಅರುಣ್ ಕುಮಾರ್ , ದುರಸ್ತಿಗಾಗಿ ಸಕ್ಕರೆ ಪಾಕದ ಕಂಟೈನರ್ ನ್ನು ಸೋಮವಾರ ಸಂಜೆ ಸ್ವಚ್ಛಗೊಳಿಸುವ ವೇಳೆ ಕಾಲುಜಾರಿ ಕಂಟೈನರ್ ನೊಳಗೆ ಬಿದ್ದು ಅವರ ತಲೆ ಮತ್ತು ಬುಜಗಳಿಗೆ ಪೆಟ್ಟು ಬಿದ್ದಿದೆ. ಬಿದ್ದ ರಭಸಕ್ಕೆ ಗಾಬರಿಗೊಂಡ ಪ್ರಜ್ಞೆತಪ್ಪಿದ್ದಾರೆ. ತಕ್ಷಣವೇ ಅವರನ್ನು ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.
ಆದರೆ, ಸೋಮವಾರ ಮೃತ ಕಾರ್ಮಿಕನ ಸಂಬಂಧಿಕರನ್ನು ಕರೆಸಿಕೊಂಡ ಕಾರ್ಖಾನೆಯ ಆಡಳಿತ ಮಂಡಳಿಯವರು, ಅರುಣ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿ, 2 ಲಕ್ಷ ರೂ.ಪರಿಹಾರ ನೀಡಿ ಅಂತ್ಯಕ್ರಿಯೆ ನಡೆಸುವಂತೆ ಸೂಚಿಸಿದ್ದರು. ಬಳಿಕ ಮೃತದೇಹವನ್ನು ಗೊರವನಹಳ್ಳಿಗೆ ಕೊಂಡೊಯ್ಯುವಾಗ ದೇಹದ ಬುಜ ಹಾಗೂ ಬೆನ್ನಿನ ಭಾಗದಲ್ಲಿರಕ್ತ ಹೆಪ್ಪುಗಟ್ಟಿರುವುದು ಮತ್ತು ತಲೆಗೆ ಗಾಯವಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ.
ಇದರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇದು ಸಹಜ ಸಾವಲ್ಲ. ಅವಘಡ ಅಥವಾ ಬೇರೆ ಕಾರಣದಿಂದ ಸಂಭವಿಸಿರಬಹುದು ಎಂದು ಶಂಕಿಸಿ, ಮಂಗಳವಾರ ಮುಂಜಾನೆ ಮೃತದೇಹವನ್ನು ಕಾರ್ಖಾನೆಯ ಮುಖ್ಯದ್ವಾರದ ಬಳಿ ಇಟ್ಟು ಪ್ರತಿಭಟಿಸಲಾಯಿತು.
ಪ್ರತಿಭಟನೆಯಲ್ಲಿಬೆಂಗಳೂರಿನ ಡಾ.ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ.ಮೂರ್ತಿ, ರೈತಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ್ , ಮುಖಂಡರಾದ ಬೆಟ್ಟಹಳ್ಳಿ ಶಿವರಾಮು, ತುರಗನೂರು ಕೃಷ್ಣ, ಚಂದ್ರು, ಮೃತ ಕಾರ್ಮಿಕನ ತಂದೆ ಜಯರಾಮು, ತಾಯಿ ರತ್ನಮ್ಮ, ಸಹೋದರ ಕಿರಣ್ ಸೇರಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
.........................
22 ಲಕ್ಷ ರೂ.ಪರಿಹಾರ
ಘಟನೆ ಹಿನ್ನೆಲೆಯಲ್ಲಿಸ್ಥಳಕ್ಕೆ ಆಗಮಿಸಿದ ಮದ್ದೂರು ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ , ಪೊಲೀಸ್ ಇನ್ ಸ್ಪೆಕ್ಟರ್ ಅನಿಲ್ ಅವರು ಮೃತ ಕಾರ್ಮಿಕರ ಕುಟುಂಬದವರು ಮತ್ತು ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚಿಸಿದರು.
ಈ ವೇಳೆ ಕಾರ್ಖಾನೆಯ ಡಿಜಿಎಂ ರವಿ ಅವರು ಕಾರ್ಖಾನೆಯ ಉಪಾಧ್ಯಕ್ಷ ಆರ್ .ಮಣಿ ಅವರೊಂದಿಗೆ ಮೊಬೈಲ್ ಸಂಭಾಷಣೆ ನಡೆಸಿ ಪರಿಹಾರ ಮೊತ್ತದ ಬಗ್ಗೆ ಚರ್ಚಿಸಿದರು. ಮಾತುಕತೆಯ ಫಲವಾಗಿ ಕಾರ್ಖಾನೆಯವರು 22 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ನೀಡಿದರು. ನಂತರ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದರು. ಬಳಿಕ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿಮರಣೋತ್ತರ ಪರೀಕ್ಷೆ ನಡೆಸಿದ ಶವವನ್ನು ವಾರಸುದಾರರಿಗೆ ನೀಡಲಾಯಿತು.
ಕೋಟ್
ಕಾರ್ಮಿಕ ಅರುಣ್ ಕುಮಾರ್ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿಮಾತುಕತೆಯ ಪರಿಣಾಮ ಚಾಂಶುಗರ್ ಆಡಳಿತ ಮಂಡಳಿ 22 ಲಕ್ಷ ರೂ. ಪರಿಹಾರ ನೀಡಿದೆ. ಘಟನೆ ಹಿನ್ನೆಲೆಯಲ್ಲಿಮೃತನ ತಂದೆ ಜಯರಾಮು ಅವರು ನೀಡಿದ ದೂರಿನ ಮೇರೆಗೆ ಅಸ್ವಾಭಾವಿಕ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಜಿ.ಎಸ್ .ಅನಿಲ್ ಕುಮಾರ್ , ಇನ್ಸ್ ಪೆಕ್ಟರ್ , ಭಾರತಿನಗರ ಪೊಲೀಸ್ ಠಾಣೆ
---------------------------------
ಫೋಟೋ17ಬಿಟಿಜಿ2- ಮಂಡ್ಯ ಜಿಲ್ಲೆಮದ್ದೂರು ತಾಲೂಕಿನ ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂಭಾಗ ಮೃತ ಅರುಣ್ ಕುಮಾರ್ ಗೆ ಕಾರ್ಖಾನೆ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಾರ್ಖಾನೆಯ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಫೋಟೋ17ಬಿಟಿಜಿ3- ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕ ಅರುಣ್ ಕುಮಾರ್ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.