ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ಫೋಟೋಗ್ರಫಿಕ್ ಸೊಸೈಟಿಯು ನೀನಾಸಂ ಸಂಸ್ಥೆಯ ಸಹಯೋಗದಲ್ಲಿಹೆಗ್ಗೋಡಿನಲ್ಲಿಡಿ. 25 ರಿಂದ 27ರವರೆಗೆ ಮೂರು ದಿನಗಳ ವಸತಿಸಹಿತ ರಾಜ್ಯಮಟ್ಟದ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಿದೆ.
ನಿಯಮಿತ ಸ್ಥಳಾವಕಾಶ ಇರುವ ಕಾರಣ ಕಮ್ಮಟದ ಶುಲ್ಕ ಪಾವತಿಸಿ ಮೊದಲು ಹೆಸರು ನೋಂದಾಯಿಸಿದವರಿಗೆ ಡಾರ್ಮೆಟರಿ ಉಚಿತ ವಸತಿಯಲ್ಲಿಆದ್ಯತೆ ನೀಡಲಾಗುವುದು. ಆಸಕ್ತರು ವಿವರಗಳಿಗೆ ಕಾರ್ಯದರ್ಶಿ ಜಿ.ಆರ್ . ಪಂಡಿತ್ ಅವರನ್ನು ಮೊ.ಸಂ. 94486 27878 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.