ಶ್ರದ್ಧಾ ಭಕ್ತಿಯಿಂದ ಜರುಗಿದ ಕಾಳಿಕಾದೇವಿ ಜಾತ್ರೆ

Contributed by: pbdkdl72@gmail.com|Vijaya Karnataka•
Vijay Karnataka
ಚಿತ್ರ19ಕೆಡಿಎಲ್ 2: ಹುಣಸಗಿ ಪಟ್ಟಣದಲ್ಲಿಕಾಳಿಕಾದೇವಿ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಸೇವೆ ನಡೆಯಿತು.

* ಜಾತ್ರೆ ಪ್ರಯುಕ್ತ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ
ಶ್ರದ್ಧಾ ಭಕ್ತಿಯಿಂದ ಜರುಗಿದ ಕಾಳಿಕಾದೇವಿ ಜಾತ್ರೆ

ವಿಕ ಸುದ್ದಿಲೋಕ ಕೊಡೇಕಲ್

ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ18ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಮತ್ತು ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು.

ಮಂಗಳವಾರ ಬೆಳಗ್ಗೆ ಕಾಳಿಕಾದೇವಿ ಅಷ್ಟೋತ್ತರ, ಪಾರಾಯಣ, ದೇವಿಗೆ ಅಭಿಷೇಕ ಅಲಂಕಾರ ಮುತ್ತೈದೆಯರಿಗೆ ವಿಶೇಷ ಪೂಜೆ ಮತ್ತಿತರ ಕಾರ್ಯಕ್ರಮ ನಡೆದವು. ಬೆಳಗ್ಗೆ ಕಾಳಪ್ಪಾಚಾರ್ಯ ವಿಶ್ವಕರ್ಮ ನೇತೃತ್ವದಲ್ಲಿಪಂಚಾಮೃತ ಅಭಿಷೇಕದ ಬಳಿಕ ದೇವಿಗೆ ಮಂಗಳಾರುತಿ ಸಲ್ಲಿಸಿದ ನಂತರ ಪಲ್ಲಕ್ಕಿ ಸೇವೆ ಆರಂಭವಾಯಿತು. ಈ

ಸಂದರ್ಭದಲ್ಲಿನಾನಾ ಗ್ರಾಮಗಳಿಂದ ಆಗಮಿಸಿದ ಕಲಾವಿದರಿಂದ ಪುರವಂತರ ಸೇವೆ ನಡೆಯಿತು.

ಪಟ್ಟಣದ ಕಾಳಿಕಾದೇವಿ ದೇವಸ್ಥಾನದಿಂದ ನೀಲಕಂಠೇಶ್ವ ದೇವಸ್ಥಾನದ ಮುಖಾಂತರ ಶ್ರೀದೇವಿ ದೇವಸ್ಥಾನವರೆಗೂ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಸೇವೆ ನಡೆಯಿತು. ಮರಳಿ ದೇವಸ್ಥಾನಕ್ಕೆ ಪಲ್ಲಕ್ಕಿ ಆಗಮಿಸಿ ಬಳಿಕ ಮಹಾ ಮಂಗಳಾರುತಿಯೊಂದಿಗೆ ಜಾತ್ರೆ ಸಂಪನ್ನವಾಯಿತು. ಗ್ರಾಮದೇವತೆ ಅರ್ಚಕರಾದ ಈರಣ್ಣ ಬಡಿಗೇರ, ಹಿರಿಯ ಮುಖಂಡ ಕಾಳಪ್ಪ ಬಡಿಗೇರ, ದೇವಿಂದ್ರಪ್ಪ ಬಡಿಗೇರ, ಹನಮಂತ್ರಾಯ ಪತ್ತಾರ, ಈರಣ್ಣ ಪತ್ತಾರ ತಿಳಗೂಳ, ವಿರುಪಾಕ್ಷಿ ಪತ್ತಾರ ತಮದೊಡ್ಡಿ, ಮಾನಪ್ಪ ನಾವದಗಿ, ಮಾನಯ್ಯ ಗುಳಬಾಳ, ರಾಘವೇಂದ್ರ ಪತ್ತಾರ, ತೇಜಪ್ಪ ಬಡಿಗೇರ ಇತರರು ಇದ್ದರು.

ಜಾತ್ರೆಯಲ್ಲಿಪಾಲ್ಗೊಂಡಿದ್ದ ಎಲ್ಲಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನಾನಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಹಾಗೂ ವಿಶ್ವಕರ್ಮ ಬಂಧುಗಳು ಪಾಲ್ಗೊಂಡು ದೇವಿಯ ದರ್ಶನ ಪಡೆದರು.