ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣಕ್ಕೆ ತಡೆ | ಕುರುಬ ಸಮಾಜದ ಮುಖಂಡರ ಆಗ್ರಹ
ಕೂಡಲೇ ಪೌರಾಯುಕ್ತರ ವಜಾ ಮಾಡಿವಿಕ ಸುದ್ದಿಲೋಕ ಸಿಂದಗಿ
ರಸ್ತೆ ಅತಿಕ್ರಮಣವಾಗಿದೆಂದು ನಗರದಲ್ಲಿಸಂಗೊಳ್ಳಿ ರಾಯಣ್ಣ ವೃತ್ತ ನವೀಕರಣ ಕಾಮಗಾರಿ ತಡೆಯುವಂತೆ ಪೊಲೀಸ್ ಠಾಣೆಗೆ ನಗರಸಭೆ ಪತ್ರ ಬರೆದಿರುವುದನ್ನು ತಾಲೂಕು ಕುರುಬ ಸಮಾಜದ ಮುಖಂಡರು ವಿರೋಧಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ, ‘‘ನಗರದಲ್ಲಿರಸ್ತೆ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳು ನಿರ್ಮಿಸಿ ಬಾಡಿಗೆ ಪಡೆಯುತ್ತಿರುವವರಿಗೆ ಮೊದಲು ನಗರಸಭೆ ಪೌರಾಯುಕ್ತರು ನೋಟಿಸ್ ನೀಡಬೇಕು. 20 ಅಡಿ ಜಾಗದಲ್ಲಿನಿರ್ಮಾಣಗೊಳ್ಳುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೃತ್ತ ಕಾಮಗಾರಿ ತಡೆ ಹಿಡಿದು ಪೊಲೀಸ್ ಬಂದೋಬಸ್ ್ತ ನೀಡುವಂತೆ ಪೌರಾಯುಕ್ತರು ಪತ್ರ ಬರೆದಿರುವಲ್ಲಿವೈಯಕ್ತಿಕ ಹಿತಾಸಕ್ತಿ ಕಾಣುತ್ತಿದೆ,’’ ಎಂದು ಆರೋಪಿಸಿದರು.
ಸಿದ್ದು ಬುಳ್ಳಾ, ಪ್ರಕಾಶ ಹಿರೇಕುರುಬರ ಹಾಗೂ ಸಂತೋಷ ಮಣಿಗೇರಿ ಮಾತನಾಡಿ, ‘‘ಪಕ್ಷಾತೀತ, ಜಾತ್ಯತೀತವಾಗಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರನ್ನು ಕರೆಯಿಸಿ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಶಾಸಕರು ಭೂಮಿಪೂಜೆ ಮಾಡಿದ ಕಾಮಗಾರಿಗೆ ಒಂದು ತಿಂಗಳ ನಂತರ ನಗರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದು ಯಾರ ಕುಮ್ಮಕ್ಕಿನ ಮೇಲೆ? ಎಂಬುದು ಪೌರಾಯುಕ್ತರು ಸ್ಪಷ್ಟಪಡಿಸಬೇಕು. ಶಾಸಕರು ಮಧ್ಯಸ್ಥಿಕೆ ವಹಿಸಿ ಈ ಘಟನೆಯನ್ನು ಇತ್ಯರ್ಥಗೊಳಿಸಿ ನೋಟಿಸ್ ನೀಡಿದ ಅಧಿಕಾರಿಯನ್ನು ವಜಾ ಮಾಡಬೇಕು. ಇಲ್ಲವಾದರೆ ಸಿಂದಗಿ ಬಂದ್ ಕರೆ ನೀಡಿ ಪ್ರತಿಭಟನೆ ಮಾಡಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.
ಶಿವು ಗಣಿಹಾರ, ಲಕ್ಕಪ್ಪ ಜೇವರಿಗಿ, ದತ್ತಾತ್ರೇತ ಯಡಳ್ಳಿ ಇದ್ದರು.
--
ಷಡ್ಯಂತ ಬಹಿರಂಗವಾಗಲಿ
‘‘ರಾಯಣ್ಣ ದೇಶದ ಸ್ವಾತಂತ್ರ್ಯ ಸೇನಾನಿ. ಅಂಥವರ ವೃತ್ತಕ್ಕೆ ಅಡ್ಡಿಯಾಗುವುದು ಸಂವಿಧಾನ ವಿರೋಧಿ ಚಟುವಟಿಕೆ. ಮಹನೀಯರ ವೃತ್ತ ನಿರ್ಮಾಣ, ಕಾಮಗಾರಿಗಳಲ್ಲಿರಾಜಕೀಯ ಸಲ್ಲದು. ದೇಶ ಭಕ್ತನ ವೃತ್ತ ತಡೆ ಹಿಡಿಯುವುದರ ಹಿಂದೆ ಇರುವ ಷಡ್ಯಂತ್ರ ಬಹಿರಂಗವಾಗಬೇಕು. ಕಾನೂನಾತ್ಮಕವಾಗಿ ನಾವು ವೃತ್ತ ನಿರ್ಮಿಸಿಯೇ ತೀರುತ್ತೇವೆ,’’ ಎಂದು ಮುಖಂಡರು ಹೇಳಿದರು.