ವಿಕ ಸುದ್ದಿಲೋಕ ರಾಣೇಬೆನ್ನೂರಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ, ಕನ್ನಡದ ಕಾಯಕ ಮಾಡಲು ಹುಮ್ಮಸ್ಸು ಬಂದಿದೆ. ಉಸಿರು ಇರುವ ತನಕ ಕನ್ನಡದ ಉಳಿವಿಗಾಗಿ ಶ್ರಮಿಸುವೆ ಎಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಣ್ಣ ಕುಸಗೂರ ಹೇಳಿದರು.
ಸ್ಥಳೀಯ ಅಶೋಕ ನಗರದ ಶಿಶುವಿಹಾರ ಮಹಿಳಾ ಸಮಾಜದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘‘ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಮಾತೃಭಾಷೆ ಕನ್ನಡ ಇದೀಗ ಅಳಿವಿನ ಅಂಚಿನಲ್ಲಿದೆ. ಕನ್ನಡಿಗರಾದ ನಾವುಗಳೇ ಕನ್ನಡವನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡುವುದು ಅನಿವಾರ್ಯವಾಗಿದೆ,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷೆ ಗಾಯಿತ್ರಮ್ಮ ಕುರುವತ್ತಿ ಮಾತನಾಡಿ.‘‘ಕನ್ನಡದ ಉಳಿವು ಮನೆಯಿಂದಲೇ ಆರಂಭವಾಗಬೇಕಾಗಿದೆ. ಮನೆಯಲ್ಲಿತಾಯಿಯೇ ಕನ್ನಡದ ಅರಿವಿನ ಬಗ್ಗೆ ಮಾಹಿತಿ ನೀಡಬೇಕು’’ ಎಂದರು.
ಹಿರಿಯ ಕವಿಯತ್ರಿ ದ್ರಾಕ್ಷಾಯಣಮ್ಮ ಹರಪನಹಳ್ಳಿ, ಅನ್ನಪೂರ್ಣಮ್ಮ ದಾನಪ್ಪನವರ, ಜಯಶ್ರೀ ಮುರಡಣ್ಣನವರ, ಗೀತಾ ಜಂಬಗಿ, ಲಕ್ಷ್ಮಿ ದೇವಗಿರಿ, ಚಂದ್ರಾ ದಾನಪ್ಪನವರ, ಪ್ರಭಯ್ಯ ಹಿರೇಮಠ, ಉಮಾ ಅಂಕಲ ಕೋಟಿ, ಮಂಜುಳಾ ಪಾಟೀಲ, ಗೀತಾ ಮಡಿವಾಳರ, ಗಿರಿಜಾ ಯಡಿಯಾಪುರ ಸೇರಿದಂತೆ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಧಿ
ಫೋಟೋ ಕ್ಯಾಪ್ಷನ್ )18-ಆರ್ ಎನ್ ಆರ್ -02
ರಾಣೇಬೆನ್ನೂರಿನ ಅಶೋಕ ನಗರದ ಶಿಶುವಿಹಾರ ಮಹಿಳಾ ಸಮಾಜದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಣ್ಣ ಕುಸಗೂರ ಅವರನ್ನು ಸನ್ಮಾನಿಸಲಾಯಿತು.