ಮುದಗಲ್ - ಉತ್ಸವ ಮೂರ್ತಿ ಮೆರವಣಿಗೆ

Contributed by: dnkodihal@gmail.com|Vijaya Karnataka•
Vijay Karnataka
ಉತ್ಸವ ಮೂರ್ತಿ ಮೆರವಣಿಗೆ

ಮುದಗಲ್ : ಪಟ್ಟಣದ ಕಿಲ್ಲಾದಲ್ಲಿರುವ ಕಾಳಿಕಾದೇವಿ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಕಾಳಿಕಾದೇವಿ ಉತ್ಸವ ಮೂರ್ತಿ ಮೆರವಣಿಗೆ ಗುರುವಾರ ಭಕ್ತಿಭಾವದಿಂದ ಜರುಗಿತು. ಬೆಳಗಿನ ಜಾವ ದೇವಿಗೆ ವಿಶೇಷ ಪೂಜೆ, ಹೂವಿನಿಂದ ಅಲಂಕರಿಸಿ ಗಂಗಾಪೂಜೆ ನೇರವೇರಿಸಲಾಯಿತು. ಪಟ್ಟಣದ ಶೀಲವಂತಮ್ಮದೇವಿ ದೇವಸ್ಥಾನದಿಂದ ಆರಂಭವಾದ ಉತ್ಸವ ಮೂರ್ತಿ ಮೆರವಣಿಗೆಯಲ್ಲಿಮಹಿಳೆಯರು ಕುಂಭಕಳಸ ಹೊತ್ತು ಮೆರುಗು ತಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿವಾದ್ಯ ಮೇಳಗಳೊಂದಿಗೆ ಭಕ್ತರು ದೇವಿಯ ಜಯಘೋಷ ಮೊಳಗಿಸಿದರು. ಕಾಳಿಕಾದೇವಿಗೆ ಕಳಸಾರೋಹಣ ಮಾಡಲಾಯಿತು. ಮಹಿಳೆಯರು,ಯುವಕರು ಸೇರಿ ನೂರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು.
---

ಆರ್ ಸಿಎಚ್ 19ಮುದಗಲ್ 04:

ಮುದಗಲ್ ಪಟ್ಟಣದ ಕಿಲ್ಲಾದಲ್ಲಿರುವ ಕಾಳಿಕಾದೇವಿ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಕಾಳಿಕಾದೇವಿ ಉತ್ಸವ ಮೂರ್ತಿ ಮೆರವಣಿಗೆ ಗುರುವಾರ ಭಕ್ತಿಭಾವದಿಂದ ಜರುಗಿತು.