ವಿಕ ಸುದ್ದಿಲೋಕ ಶಿರಾಪ್ರತಿಯೊಬ್ಬ ಮನುಷ್ಯನಿಗೂ ಸಹ ತನ್ನದೊಂದು ಸ್ವಂತ ಮನೆ ಇರಬೇಕು ಎಂಬುದು ಜೀವನದ ಒಂದು ಆಸೆಯಾಗಿರುತ್ತದೆ. ತಮ್ಮ ಬದುಕಿನ ಪ್ರಾತಃಕಾಲವನ್ನು ಸ್ವಂತ ಮನೆಯಲ್ಲಿಕಳೆಯಬೇಕು ಎಂಬ ಗುರಿ ಹೊಂದಿರುತ್ತಾರೆ. ಕೆಲವರಿಗೆ ಇಂತಹ ಆಸೆಗಳು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ನಿರ್ಗತಿಕರಿಗೆ ಸುಂದರ ಮನೆ ನಿರ್ಮಿಸಿ ನೆಮ್ಮದಿಯ ಬದುಕು ಕಟ್ಟಿಕೊಡುವುದು ವಾತ್ಸಲ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು ಜಿಲ್ಲೆಯ ಜಿಲ್ಲಾನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.
ಅವರು ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಚಿಕ್ಕ ಅಗ್ರಹಾರ ಗ್ರಾಮದ ಲಕ್ಷತ್ರ್ಮಕ್ಕ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿಆದ ಸಾವು ನೋವುಗಳನ್ನು ಕಣ್ಣಾರೆ ಕಂಡು ಮರುಗಿದ್ದ ಹೇಮಾವತಿ ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಶಕ್ತರು ಹಾಗೂ ತಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದೆ ಬದುಕಿನ ಸಂಧ್ಯಾ ಕಾಲವನ್ನು ಪ್ರವೇಶಿಸಿದವರನ್ನು ಗುರುತಿಸಿ ಉತ್ತಮ ಮನೆ ನಿರ್ಮಿಸಿ ಕೊಡುವ ಆಶಯವನ್ನು ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿಈಗಾಗಲೇ ಶಿರಾ ತಾಲೂಕಿನ ಆರು ಮನೆಗಳು ಹಾಗೂ ತುಮಕೂರು ಜಿಲ್ಲೆಯಾದ್ಯಂತ 100 ಮನೆಗಳು ಮತ್ತು ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡುವ ಕೆಲಸವಾಗುತ್ತಿದೆ. ಬದುಕಿನ ಸುರಕ್ಷಿತ ಆಸರೆ ದೊರಕಿಸಿಕೊಡುವ ನಿಟ್ಟಿನಲ್ಲಿಹೆಗ್ಗಡೆ ದಂಪತಿ ಅವರ ಆಶಯ ಇಂದು ನೆರವೇರುತ್ತಿದೆ ಎಂದರು.
ಶಿರಾ-2 ಯೋಜನಾಧಿಕಾರಿ ರಮೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿನೂರಾರು ಕಾರ್ಯಕ್ರಮಗಳ ಮೂಲಕ ಮಹಿಳೆಯರ ಹಾಗೂ ಗ್ರಾಮೀಣ ಜನರ ಸ್ವಾವಲಂಬನೆಗೆ ಶ್ರಮಿಸಲಾಗುತ್ತಿದೆ. ಯಾರೂ ಇಲ್ಲದ ನಿರ್ಗತಿಕರಿಗೆ ಮಾಸಾಶನ ನೀಡುವುದು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮೂಲಕ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ತರಬೇತಿ ಕಾರ್ಯಕ್ರಮಗಳನ್ನು ಮಾಡುವುದು, ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸುವುದು ಸೇರಿದಂತೆ ನೂರಾರು ಯೋಜನೆಗಳಲ್ಲಿಅತ್ಯುತ್ತಮ ಯೋಜನೆ ಈ ವಾತ್ಸಲ್ಯ ಯೋಜನೆಯಾಗಿದೆ. ನಿರ್ಗತಿಕ ಮಾಸಾಶನ ಪಡೆಯುವ ಹಿರಿಯ ಜೀವಗಳಿಗೆ ಬದುಕಿನ ಕೊನೆಯಲ್ಲಿಸುರಕ್ಷಿತ ಬಾವ ಮೂಡಿಸುವ ಹೇಮಾವತಿ ಹೆಗ್ಗಡೆ ಅವರ ಈ ಆಶಯ ಉತ್ತಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಜಿಲ್ಲೆಯ ಎಂಐಎಸ್ ಯೋಜನಾಧಿಕಾರಿಗಳಾದ ಸಂತೋಷ್ ರಾವ್ , ಶಿರಾ-1 ಯೋಜನಾಧಿಕಾರಿ ದೇವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಒಕ್ಕೂಟದ ಅಧ್ಯಕ್ಷರಾದ ಯೋಶೋಧಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾ ಟಿ., ವಲಯದ ಮೇಲ್ವಿಚಾರಕರಾದ ನಗ್ಮಾ, ಸೇವಾ ಪ್ರತಿನಿಧಿ ರವಿಕುಮಾರ್ ಸೇರಿದಂತೆ ಧರ್ಮಸ್ಥಳ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
19ಶಿರಾ1: ಬುಕ್ಕಾಪಟ್ಟಣ ಹೋಬಳಿಯ ಚಿಕ್ಕ ಅಗ್ರಹಾರ ಗ್ರಾಮದ ಲಕ್ಷತ್ರ್ಮಕ್ಕ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.