ಮಹಿಳೆ ಕಾಣೆ

Contributed by: VIJAYKUMAR P|Vijaya Karnataka•
Vijay Karnataka
ಮಹಿಳೆ ಕಾಣೆ

ವಿಕ ಸುದ್ದಿಲೋಕ ಹುಬ್ಬಳ್ಳಿ
ಮನೆಯಿಂದ ಹೊರಗೆ ಹೋದ ಮಹಿಳೆಯೊಬ್ಬಳು ವಾಪಸ್ ಬರದೇ ಕಾಣೆಯಾದ ಘಟನೆ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಇತ್ತೀಚೆಗೆ ನಡೆದಿದೆ.

ಸುಳ್ಳ ರಸ್ತೆಯ ಮನೋಜ ಪಾರ್ಕ್ ನಿವಾಸಿ ಲತಾ ಅಲಿಯಾಸ್ ಸುಮನ್ ತಮ್ಮನಗೌಡ ಪಾಟೀಲ(44) ಕಾಣೆಯಾದವರು. ನ.2ರಂದು ತಮ್ಮ ಮನೆಯಿಂದ ಲತಾ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲಎಂದು ಅವರ ತಂದೆ ಯಲ್ಲಪ್ಪ ಹೊನ್ನಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಕೇಶ್ವಾಪೂರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಚಹರೆ: 5.6 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ದೇಹ, ದುಂಡು ಮುಖ, ಅಗಲವಾದ ಹಣೆ, ತೆಳುವಾದ ಹುಬ್ಬು, ಉದ್ದ ಮೂಗು, ತಲೆಯಲ್ಲಿಸುಮಾರು 18 ಇಂಚು ಕರಿ ಕೂದಲು ಹೊಂದಿದ್ದಾರೆ. ಮನೆಯಿಂದ ಹೋಗುವಾಗ ತಿಳಿ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು, ಕಿವಿಯೋಲೆ ಮತ್ತು ತಾಳಿ ಚೈನ್ ಇದೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕಲ್ಲಿಪೊಲೀಸ್ ಮೊ.9480802026, ದೂ.0836-2233555 ಅಥವಾ 100 ಸಂಖ್ಯೆಗೆ ಕರೆ ಮಾಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಫೋಟೊ: ಲತಾ ಪಾಟೀಲ