ಮಿತ ಆಹಾರ ಆರೋಗ್ಯಕ್ಕೆ ಒಳ್ಳೆಯದುವಿಕ ಸುದ್ದಿಲೋಕ ಚಿತ್ರದುರ್ಗ
ಆರೋಗ್ಯಕ್ಕಿಂತ ಅಮೂಲ್ಯ ಸಂಪತ್ತು ಮತ್ತೊಂದಿಲ್ಲ. ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಪ್ರತಿಯೊಬ್ಬರು ಒಂದಲ್ಲಒಂದು ರೀತಿಯ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದ್ದು, ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುವಂತೆ ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದರು.
ನಗರದ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿಎರಡು ದಿನಗಳ ಕಾಲ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿಹೃದಯಾಘಾತ, ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯವಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾನವನ ದೇಹದಲ್ಲಿಕಣ್ಣು ಅತಿ ಸೂಕ್ಷತ್ರ್ಮವಾದುದು. ದೃಷ್ಟಿ ಕಳೆದುಕೊಂಡರೆ ಜೀವನವೇ ಕತ್ತಲಾಗುತ್ತದೆ. ಹಾಗಾಗಿ ನೇತ್ರ ರಕ್ಷಣೆಗೂ ಒತ್ತು ಕೊಡಬೇಕು. ಸಾರ್ವಜನಿಕರಿಗೂ ಉಪಯೋಗವಾಗಲಿ ಎನ್ನುವ ದೃಷ್ಟಿಯಿಟ್ಟುಕೊಂಡು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಮಾತನಾಡಿ, ಜೀವನದಲ್ಲಿಯಾರೂ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಮಿತ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಸಾವು-ಬದುಕಿನ ನಡುವೆ ಹೋರಾಡುವವರ ಪ್ರಾಣ ಉಳಿಸಬಹುದು ಎಂದು ಹೇಳಿದರು.
ಬೆಂಗಳೂರಿನ ಒಮೇಗಾ ಆರ್ಥೊಸ್ಪೈನ್ ಸೆಂಟರ್ ನ ಮೂಳೆ ತಜ್ಞ ಡಾ.ಕಿರಣ್ ತೇಜ್ ನೇತೃತ್ವದ ತಂಡ ಸಾರ್ವಜನಿಕರಿಗೆ ಉಚಿತವಾಗಿ ಬೆನ್ನು ಮೂಳೆ ಮತ್ತು ಮೂಳೆ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.
ಚಿತ್ರದುರ್ಗದ ಕೃಷ್ಣ ನರ್ಸಿಂಗ್ ಹೋಂನಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. ಶಿಕ್ಷಣ ಸಂಸ್ಥೆಯ ಸಿಬಿಎಸ್ ಇ ವಿಭಾಗದ ಪ್ರಾಚಾರ್ಯ ಎಂ.ಎಸ್ .ಪ್ರಭಾಕರ್ , ಐಸಿಎಸ್ ಇ ವಿಭಾಗದ ಪ್ರಾಚಾರ್ಯೆ ಎಂ.ಎಸ್ .ಅರ್ಪಿತ ರಕ್ತದಾನ ಮಾಡಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿಭಾಗವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಶಾಖೆಯ ಅರುಣ್ ಕುಮಾರ್ , ಗುರುಮೂರ್ತಿ, ಮಜರ್ ವುಲ್ಲಾ, ಮತ್ತಿತರರಿದ್ದರು.
ಫೋಟೊ ಕ್ಯಾಪ್ಷನ್ /19ಸಿಟಿಡಿ33
ಚಿತ್ರದುರ್ಗದ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿರಕ್ತದಾನ ಮಾಡಿದವರಿಗೆ ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಪ್ರಮಾಣಪತ್ರ ವಿತರಿಸಿದರು.
ಫೋಟೊ ಕ್ಯಾಪ್ಷನ್ /19ಸಿಟಿಡಿ33ಎ
ಚಿತ್ರದುರ್ಗದ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿಗುರುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.