ಹೇಮಗಿರಿ ಶುಗರ್ಸ್ ಎದುರು ಕಬ್ಬು ಬೆಳೆಗಾರರ ಪ್ರತಿಭಟನೆ

Contributed by: ballekeremanju@gmail.com|Vijaya Karnataka•
Vijay Karnataka
- ಹೆಚ್ಚುವರಿ ದರ ಘೋಷಿಸದಿದ್ದರೆ ಸಕ್ಕರೆ ಮಾರಾಟ ತಡೆ ಚಳವಳಿ ಎಚ್ಚರಿಕೆ

ವಿಕ ಸುದ್ದಿಲೋಕ ಕೆ.ಆರ್ .ಪೇಟೆ
ಒಂದು ವಾರದೊಳಗೆ ತಾಲೂಕಿನ ಹೇಮಗಿರಿ ಶುಗರ್ಸ್ ಕಬ್ಬಿಗೆ ಈಗಿರುವ ಎಫ್ ಆರ್ ಪಿ ಜತೆಗೆ ಉಪ ಉತ್ಪನ್ನಗಳ ಲಾಭಾಂಶದಲ್ಲಿ1,350 ರೂಪಾಯಿಗಳಷ್ಟು ಹಣವನ್ನು ಹೆಚ್ಚುವರಿಯಾಗಿ ನೀಡಬೇಕು. ಇಲ್ಲದಿದ್ದರೆ ನ.25ರ ನಂತರ ಸಕ್ಕರೆ ಮಾರಾಟ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಹೇಳಿದರು.

ಅವರು ತಾಲೂಕು ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹೇಮಗಿರಿ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

‘‘ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಇರುವ ಅನೇಕ ಸಕ್ಕರೆ ಕಾರ್ಖಾನೆಗಳು 2026-27ನೇ ಸಾಲಿನ ಕಬ್ಬಿಗೆ ಎಫ್ ಆರ್ ಪಿ ದರಕ್ಕಿಂತ ಹೆಚ್ಚುವರಿ ದರ ಘೋಷಣೆ ಮಾಡಿರುವಂತೆ ಹೇಮಗಿರಿ ಸಕ್ಕರೆ ಕಾರ್ಖಾನೆಯೂ ಹೆಚ್ಚುವರಿ ದರ ಘೋಷÜಣೆ ಮಾಡಬೇಕು. 2026-27ನೇ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಸೇರಿಸಿ ಟನ್ ಒಂದಕ್ಕೆ 3,383 ರೂ.ನೀಡುತ್ತಿದ್ದಾರೆ. ಈ ವರ್ಷದ ಹಂಗಾಮಿನ ಕಬ್ಬನ್ನು ಕಟಾವು ಮಾಡಿ ಅಂತಿಮ ಹಂತಕ್ಕೆ ಬಂದಿದೆ. ಆದರೆ ಈ ವರ್ಷ ಅತಿ ಕಡಿಮೆ ಮಳೆಯಾಗಿದ್ದು, ಇಳುವರಿಯೂ ಗಣನೀಯವಾಗಿ ಕಡಿಮೆ ಆಗಿದೆ. ರಸ ಗೊಬ್ಬರವೂ ದುಬಾರಿಯಾಗಿದ್ದು, ಕಬ್ಬು ಕಟಾವು, ಕೃಷಿ ಕೂಲಿ ಕಾರ್ಮಿಕರ ವೆಚ್ಚ ಹೆಚ್ಚಳ ಮಾಡಲಾಗಿದೆ. ಈ ಕಾರಣಗಳಿಂದ ಕಬ್ಬು ಬೆಳೆಗಾರರಿಗೆ ತುಂಬಾ ನಷ್ಟವಾಗಿರುತ್ತದೆ,’’ ಎಂದು ಕಾರಿಗನಹಳ್ಳಿ ಕುಮಾರ್ ಹೇಳಿದರು.

‘‘ಕೆ.ಆರ್ .ಪೇಟೆ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದೆ. ಇದನ್ನೆಲ್ಲಕಾರ್ಖಾನೆಯವರು ಪರಿಗಣಿಸಬೇಕು. 2025-26ನೇ ಸಾಲಿನಲ್ಲಿಸರಕಾರ 100 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿ ತನ್ನ ಪಾಲಿನ 50 ರೂ.ಗಳನ್ನು ನೀಡಿದೆ. ಆದರೆ, ಕಾರ್ಖಾನೆ ಮಾಲೀಕರು ತನ್ನ ಪಾಲಿನ 50 ರೂಪಾಯಿಗಳನ್ನು ನೀಡದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಕಾರ್ಖಾನೆಯವರು ಆ ಕೇಸನ್ನು ವಾಪಸ್ ಪಡೆದು ಪ್ರೋತ್ಸಾಹ ಧನ ನೀಡಲು ಕ್ರಮ ವಹಿಸಬೇಕು,’’ ಎಂದು ಒತ್ತಾಯಿಸಿದರು.

ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ , ಕಾರ್ಯದರ್ಶಿ ಬೋರಾಪುರ ಎಸ್ .ಬಿ.ಮಂಜುನಾಥ್ , ಖಜಾಂಚಿ ಕಾಯಿ ಮಂಜೇಗೌಡ, ನಿರ್ದೇಶಕರಾದ ವಡಕಹಳ್ಳಿ ಮಂಜೇಗೌಡ, ಚಿನ್ನೇನಹಳ್ಳಿ ದೇವರಾಜು, ಬೀರುವಳ್ಳಿ ಕುಮಾರ್ , ಎಂ.ಸಿ.ರಾಮೇಗೌಡ, ಬಿ.ವಿ.ನಾಗೇಶ್ , ದೊಡ್ಡತಾರಹಳ್ಳಿ ವೇಣು, ಚಿಕ್ಕತಾರಹಳ್ಳಿ ಮಧು, ಅಕ್ಕಿಹೆಬ್ಬಾಳು ಬೋಜನಾಯಕ್ , ಮೋದೂರು ಮಂಜುನಾಥ್ , ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ಜಿಲ್ಲಾಅಧ್ಯಕ್ಷ ಚಿಕ್ಕಳಲೆ ಮಂಜೇಗೌಡ, ಜಿಲ್ಲಾಮಹಿಳಾ ಘಟಕದ ಅಧ್ಯಕ್ಷೆ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಚಿಕ್ಕಳಲೆ ಉಮೇಶ್ , ಕಾರ್ಯದರ್ಶಿ ರಾಘವೇಂದ್ರ, ಜಾನಕಮ್ಮ , ಸಂಚಾಲಕ ಚಂದ್ರು ಸೇರಿದಂತೆ ಹಲವು ಪದಾಧಿಕಾರಿಗಳು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.

ಚಿತ್ರಶೀರ್ಷಿಕೆ: ಋಈ್ಗ19NO್ಖಓ್ಕP2ಧಿ ಕೆ.ಆರ್ .ಪೇಟೆ ತಾಲೂಕು ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹೇಮಗಿರಿ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟಿಸಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.