ಪ್ರೋತ್ಸಾಹಧನಕ್ಕೆ ಆಗ್ರಹಿಸಿ ನ.25ರಂದು ವಿಧಾನಸೌಧ ಚಲೋ

Contributed by: rameshbabunram@gmail.com|Vijaya Karnataka•
25
ವಿಕ ಸುದ್ದಿಲೋಕ ಬಾಗೇಪಲ್ಲಿ

ಕೋಳಿ ಸಾಕಾಣಿಕೆ ರೈತರಿಗೆ ಸರ್ಕಾರ ಘೋಷಿಸಿರುವ ಪ್ರತಿ ಕೆಜಿಗೆ 10 ರೂ. ತಾತ್ಕಾಲಿಕ ಪ್ರೋತ್ಸಾಹಧನವನ್ನು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ನ.25ರಂದು ಬೆಂಗಳೂರಿನಲ್ಲಿಹಮ್ಮಿಕೊಂಡಿರುವ ವಿಧಾನಸೌಧ ಚಲೋ ಹೋರಾಟದಲ್ಲಿಬಾಗೇಪಲ್ಲಿತಾಲೂಕಿನಿಂದ ಕರ್ನಾಟಕ ರಾಜ್ಯ ಕೋಳಿ ಸಾಗಣಿಕೆ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಸಹಭಾಗಿತ್ವದಲ್ಲಿಸುಮಾರು 100ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ. ರಾಮಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿನಡೆದ ತಾಲೂಕು ಕೋಳಿ ಸಾಕಾಣಿಕೆ ರೈತ ಮುಖಂಡರ ಸಭೆಯಲ್ಲಿಅವರು ಮಾತನಾಡಿದರು.

ಕೋಳಿ ಸಾಕಾಣಿಕೆಗೆ ತಗಲುವ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ಕಂಪನಿಗಳು ಹಣ ಪಾವತಿಸುತ್ತಿಲ್ಲ. ಪ್ರತಿ ಕೆಜಿಗೆ 10 ರೂ. ಪ್ರೋತ್ಸಾಹಧನ ನೀಡುವಂತೆ ಸರ್ಕಾರ ಆದೇಶ ಹೊರಡಿಸಿ 6 ತಿಂಗಳು ಕಳೆದಿದ್ದರೂ ಕಂಪನಿಗಳು ಜಾರಿಗೊಳಿಸಿಲ್ಲ. ಈ ಬಗ್ಗೆ ಸರ್ಕಾರವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿಸುಮಾರು 40 ಸಾವಿರ ಕೋಳಿ ಸಾಕಾಣಿಕೆ ರೈತರಿದ್ದಾರೆ. ಹಾಲು ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವ ಸರಕಾರ, ಕೋಳಿ ಸಾಕಾಣಿಕೆ ರೈತರ ಸಮಸ್ಯೆಗಳಿಗೆ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಮುಖ್ಯಮಂತ್ರಿ, ಸಚಿವರು ಸೇರಿದಂತೆ 100ಕ್ಕೂ ಹೆಚ್ಚು ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲಎಂದರು.

ನ. 25ರಂದು ನಡೆಯುವ ವಿಧಾನಸೌಧ ಚಲೋ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ವಿವಿಧ ಜಿಲ್ಲೆಗಳಿಂದ 5 ಸಾವಿರದಿಂದ 10 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆ ಬಳಿಕವೂ ಬೇಡಿಕೆ ಈಡೇರದಿದ್ದರೆ ಕೋಳಿ ಸಾಕಾಣಿಕೆ ಪೂರೈಕೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಕರ್ನಾಟಕ ಕೋಳಿ ಸಾಗಣಿಕೆ ಸಂಘ ಸಂಸ್ಥೆಗಳು ರೈತರು ಕಂಪನಿಯವರು ನೀಡುವ ಮರಿಗಳನ್ನು ಇಳಿಸಿಕೊಳ್ಳುವುದಿಲ್ಲ. ನಮ್ಮ ಶೆಡ್ ಗಳಲ್ಲಿಇರುವ ಕೋಳಿಗಳನ್ನು ಕೊಡಲು ಬಿಡುವುದಿಲ್ಲಎಂದರು.

ಈ ಸಂದರ್ಭದಲ್ಲಿವೆಂಕಟರೆಡ್ಡಿ, ವಿಶ್ವನಾಥ್ , ಶ್ರೀನಿವಾಸ್ , ಹನುಮಂತರೆಡ್ಡಿ, ಸತ್ಯನಾರಾಯಣ ರೆಡ್ಡಿ, ಬಾಬುರೆಡ್ಡಿ, ಉದಯ್ , ಪ್ರಣವ್ , ಭರತ್ ರೆಡ್ಡಿ, ಲಕ್ಷ್ಮೇನಾರಾಯಣ್ ಹಾಗೂ ಇತರರು ಹಾಜರಿದ್ದರು.

18 ಬಿಪಿಎಲ್ 2

ಬಾಗೇಪಲ್ಲಿಪತ್ರಕರ್ತರ ಭವನದಲ್ಲಿನಡೆದ ತಾಲೂಕು ಕೋಳಿ ಸಾಕಾಣಿಕೆ ರೈತ ಮುಖಂಡರ ಸಭೆ ನಡೆಯಿತು.