ಸ್ಮಾರಕ ರಕ್ಷಣೆಗೆ ಹಂಪಿಯಲ್ಲಿಹೆರಿಟೇಜ್ ವಾಕ್

Contributed by: rathodjayakumar92@gmail.com|Vijaya Karnataka•
Vijay Karnataka
ಸ್ಮಾರಕ ರಕ್ಷಣೆಗೆ ಹಂಪಿಯಲ್ಲಿಹೆರಿಟೇಜ್ ವಾಕ್

ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
ವಿಶ್ವ ಪರಂಪರೆ ಸಪ್ತಾಹದ ನಿಮಿತ್ತ ಶುಕ್ರವಾರ ವಿಶ್ವವಿಖ್ಯಾತ ಹಂಪಿಯಲ್ಲಿಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಹೆರಿಟೇಜ್ ವಾಕ್ ನಡೆಯಿತು.

ಹಂಪಿಯ ಐತಿಹಾಸಿಕ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಗೋಪುರದ ಮುಂಭಾಗದಿಂದ ಆರಂಭವಾದ ಈ ಪಾರಂಪರಿಕ ನಡಿಗೆಯು, ಹಂಪಿ ಬಜಾರ್ ಮಾರ್ಗವಾಗಿ ಎದುರು ಬಸವಣ್ಣ ಮಂಟಪದವರೆಗೆ ನಡೆಯಿತು.

ಹಂಪಿಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡಿಗೆಯಲ್ಲಿಭಾಗವಹಿಸಿ, ವಿದ್ಯಾರ್ಥಿಗಳಿಗೆ ಹಂಪಿಯ ಸ್ಮಾರಕಗಳ ಐತಿಹಾಸಿಕ ಮಹತ್ವ, ವಾಸ್ತುಶಿಲ್ಪ ಮತ್ತು ಅವುಗಳ ಸಂರಕ್ಷಣೆ ಕುರಿತು ಮಾರ್ಗದರ್ಶನ ನೀಡಿದರು.

ಚಿತ್ರ: ವಿಜೆಎನ್ 20ಜಯಪ್ಪ04: ಹಂಪಿಯಲ್ಲಿಪರಂಪರೆ ಸಪ್ತಾಹದ ನಿಮಿತ್ತ ಶುಕ್ರವಾರ ಪಾರಂಪರಿಕ ನಡಿಗೆ ನಡೆಯಿತು.