ಕಾಡುಪೊದೆ ಬೆಳೆದು ಹಳೆಯ ಗ್ರಾಮ ಕಚೇರಿ ಕಟ್ಟಡಕ್ಕೆ ಹಾನಿ

Contributed by: crastalp19@gmail.com|Vijaya Karnataka•
Vijay Karnataka
ಕಾಸರಗೋಡು: ಕಾಡುಪೊದೆ ಬೆಳೆದು ಹಾನಿಗೀಡಾಗುತ್ತಿರುವ ಹಳೆಯ ಗ್ರಾಮ ಕಚೇರಿ ಕಟ್ಟಡವು ನೆಲೆನಿಂತಿರುವ ಸ್ಥಳವನ್ನು ಸಂರಕ್ಷಿಸಿ ಜನರಿಗೆ ಉಪಯೋಗವಾಗುವ ಯೋಜನೆಗಳಿಗಾಗಿ ಉಪಯೋಗಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಕುತ್ತಿಕ್ಕೋಲ್ ಪೇಟೆಯಲ್ಲಿಕಾರ್ಯಾಚರಣೆಯನ್ನು ಕೊನೆಗೊಳಿಸಿದ ಹಳೆಯ ಗ್ರಾಮ ಕಚೇರಿ ಕಟ್ಟಡವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದರಿಂದ ಹಳೆ ಕಟ್ಟಡ ನಿರುಪಯುಕ್ತವಾಗಿದೆ. ಪ್ರಸ್ತುತ ಕಟ್ಟಡ ಹಾಗೂ ಪರಿಸರವು ಕಾಡುಪೊದೆ ಬೆಳೆದು ಹಾನಿಗೀಡಾಗುವ ಸ್ಥಿತಿಯಲ್ಲಿದೆ.

ಕಟ್ಟಡವು ಉಪಯೋಗಕ್ಕೆ ಬಾರದೆ ಇರುವ ಬದಲು ಕಟ್ಟಡವನ್ನು ತೆರವುಗೊಳಿಸಿ ಸ್ಥಳದಲ್ಲಿವಾಚನಾಲಯ, ಅಧ್ಯಯನ ಕೊಠಡಿ, ಓಪನ್ ಜಿಂ, ಕಲಾಕ್ರೀಡಾ ತರಬೇತಿ ಕೇಂದ್ರ ಮೊದಲಾದ ಜನೋಪಕಾರದ ಯೋಜನೆಗಳಿಗಾಗಿ ವಿನಿಯೋಗಿಸಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಚಿತ್ರ: 19ಕೆಎಸ್ ಎಲ್ ಕಟ್ಟಡ-ಉಪಯೋಗಶೂನ್ಯವಾದ ಹಳೆಯ ಗ್ರಾಮಕಚೇರಿ ಕಟ್ಟಡ.