ಜೆನ್ ಜಿ

Contributed by: Mahadev Swamy|Vijaya Karnataka•
Vijay Karnataka
ಶಿಕ್ಷಣ, ಆರೋಗ್ಯ ಸಮಾನ ಹಂಚಿಕೆಯಾಗಲಿ

ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಲು ದುಬಾರಿಯಾಗಿವೆ. ಬಡವರು, ಕೂಲಿ ಕಾರ್ಮಿಕರಿಗೆ ಉನ್ನತ ಶಿಕ್ಷಣ ಪಡೆಯುವುದು ತುಂಬ ಕಷ್ಟಕರವಾಗಿದೆ. ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಇದರಿಂದ ಖಾಸಗಿ ಶಾಲೆ-ಕಾಲೇಜುಗಳು ಹಾವಳಿ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೂಲಕ ಸಮಾನತೆಯ ಶಿಕ್ಷಣ ದೊರೆಯುವಂತೆ ಮಾಡಬೇಕು. ಇದರಿಂದ ಶೈಕ್ಷಣಿಕ ಬೆಳವಣಿಗೆ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ಸ್ಥಳೀಯ ಮಟ್ಟದಲ್ಲೂಉತ್ತಮವಾದ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ, ಆರೋಗ್ಯ ಕ್ಷೇತ್ರಕ್ಕೆ ಶಕ್ತಿ ತುಂಬಬೇಕು. ರಸ್ತೆ, ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಬಹಳಷ್ಟು ನಿರುದ್ಯೋಗ ಸಮಸ್ಯೆ ತಲೆದೋರಿದೆ. ಇದನ್ನು ಮೊದಲು ಸರಿದೂಗಿಸಬೇಕು. ಆಗ ಮಾತ್ರ ನನ್ನ ಕನಸಿನ ಭಾರತ ನಿರ್ಮಾಣವಾಗಲು ಸಾಧ್ಯ.
- ಸೋಮಶೇಖರ್ , ಪದವಿ ವಿದ್ಯಾರ್ಥಿ, ಸೋಮನಿ ಕಾಲೇಜು, ಮೈಸೂರು.