ಅಮಿನಗಡ: ‘‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದ ಮೂಲ ಉದ್ದೇಶ. ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸಹಾಯಕಾರಿಯಾಗಿದೆ,’’ಎಂದು ಸೂಳೇಬಾವಿ ಕೆಪಿಎಸ್ ಶಾಲೆ ಎಸ್ಡಿಎಂಸಿ ಸದಸ್ಯ ಕೃಷÜ್ಣ ಚಲುವಾದಿ ಹೇಳಿದರು.ಸಮೀಪದ ಸೂಳೇಭಾವಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಸೂಳೇಭಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘‘ಮಕ್ಕಳಲ್ಲಿಸೃಜನಶೀಲತೆ ಬೆಳೆಸುವ ಮೂಲಕ ಬದಲಾದ ಕಾಲಘಟ್ಟದಲ್ಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು,’’ಎಂದರು.
ಎಸ್ಡಿಎಂಸಿ ಅಧ್ಯಕ್ಷ ವಿರುಪಾಕ್ಷಪ್ಪ ಧೂಪದ ಕಾರ್ಯಕ್ರಮ ಉದ್ಘಾಟಿಸಿದರು. ಮುತ್ತಪ್ಪ ಜೀರಿಗಿ, ನಬಿಸಾಬ ಮಾಗಿ, ರಮೇಶ ಕುರಿ, ಪ್ರಭಾರಿ ಉಪಪ್ರಾಚಾರ್ಯ ಜಗದೀಶ ಬೆಲ್ಲದ, ಸಿಆರ್ ಪಿ ಆರ್ .ಪಿ.ಹಣಗಿ, ಹಿರಿಯ ಶಿಕ್ಷಕಿ ಪಿ.ಎಸ್ .ಗಿರಿಯಪ್ಪನವರ, ಶಿಕ್ಷಕ ಎಸ್ .ಬಿ.ಹುಲ್ಲಾಳ. ಮಹಾಂತೇಶ ಅಂಗಡಿ, ಶಬನಂ ತಟಗಾರ ಇದ್ದರು.
ಫೋಟೊ 20ಎಎಂಡಿ1
ಅಮೀನಗಡ ಸಮೀಪದ ಸೂಳೇಬಾವಿ ಕೆಪಿಎಸ್ ಶಾಲೆಯಲ್ಲಿಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಲಾಯಿತು.