ಭಿನ್ನಾಭಿಪ್ರಾಯವಿಲ್ಲ, ಸಂವಿಧಾನ ದಿನಾಚರಣೆಗೆ ಮಹದೇವಪ್ಪ ಬರುತ್ತಾರೆ

Contributed by: Beeresha M|Vijaya Karnataka•
Vijay Karnataka
ಭಿನ್ನಾಭಿಪ್ರಾಯವಿಲ್ಲ, ಸಂವಿಧಾನ ದಿನಾಚರಣೆಗೆ ಮಹದೇವಪ್ಪ ಬರುತ್ತಾರೆ

- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
ವಿಕ ಸುದ್ದಿಲೋಕ ಮೈಸೂರು

ಮೈಸೂರಿನಲ್ಲಿಆಯೋಜಿಸಲಾಗಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಡಾ.ಎಚ್ .ಸಿ.ಮಹದೇವಪ್ಪ ಖಂಡಿತವಾಗಿಯೂ ಆಗಮಿಸಲಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಮೊನ್ನೆ ನಡೆದ ಪೂರ್ವಭಾವಿ ಸಭೆಗೆ ಮಹದೇವಪ್ಪ ಅವರು ಅನಿವಾರ್ಯ ಕಾರಣಗಳಿಂದ ಹಾಜರಾಗಿರಲಿಲ್ಲ. ಸಭೆಗೆ ಬರಲು ಸಾಧ್ಯವಾಗದಿರುವ ಕುರಿತು ಅವರು ಮುಂಚಿತವಾಗಿಯೇ ನಮ್ಮ ಗಮನಕ್ಕೆ ತಂದಿದ್ದರು. ಅವರ ಪ್ರತಿನಿಧಿಯಾಗಿ ಅವರ ಪುತ್ರ, ಸಂಸದ ಸುನೀಲ್ ಬೋಸ್ ಪಾಲ್ಗೊಂಡಿದ್ದರು. ಮುಂಬರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಮಹದೇವಪ್ಪ ಅವರು ಆಗಮಿಸಲಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸಿಲ್ಲ,’’ ಎಂದು ತಿಳಿಸಿದರು.

‘‘ರಾಜ್ಯ ಸರಕಾರದ ವತಿಯಿಂದ ರಾಜ್ಯಮಟ್ಟದ ಸಂವಿಧಾನ ದಿನವನ್ನು ಮೈಸೂರಿನಲ್ಲಿಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಖಿಲ ಭಾರತ ರಾಷ್ಟಿ್ರೕಯ ಕಾಂಗ್ರೆಸ್ ನ ಸೂಚನೆಯಂತೆ ದೇಶದ ಪ್ರತಿಯೊಂದು ರಾಜ್ಯದಲ್ಲೂಸಂವಿಧಾನ ದಿನವನ್ನು ದೊಡ್ಡ ಪ್ರಮಾಣದಲ್ಲಿಆಚರಿಸುವುದರ ಜತೆಗೆ ಪಾದಯಾತ್ರೆ ಹಾಗೂ ಸಾರ್ವಜನಿಕ ರಾರ ಯಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿಮೈಸೂರಿನಲ್ಲಿಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ,’’ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಪೂರ್ಣ:

ಮೈಸೂರಿನಲ್ಲಿಅಂಬೇಡ್ಕರ್ ಭವನ 14 ವರ್ಷಗಳಾದರೂ ಪೂರ್ಣಗೊಳ್ಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘‘ಭವನದ ಕಾಮಗಾರಿ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ. ಡಿಸೆಂಬರ್ ಅಥವಾ ಜನವರಿ ಅಂತ್ಯದೊಳಗೆ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ,’’ ಎಂದು ತಿಳಿಸಿದರು.

‘‘ಕಾಮಗಾರಿಯಲ್ಲಿಕಳಪೆ ಕಂಡುಬಂದರೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 14 ವರ್ಷಗಳ ವಿಳಂಬಕ್ಕೆ ಹಿಂದಿನ ಸರಕಾರಗಳೂ ಕಾರಣವಾಗಿವೆ. ಈ ಅವಧಿಯಲ್ಲಿಬಿಜೆಪಿ ಸರಕಾರವೂ ಅಧಿಕಾರದಲ್ಲಿತ್ತು. ಹೀಗಾಗಿ ವಿಳಂಬದ ಹೊಣೆಯನ್ನು ಒಂದೇ ಸರಕಾರದ ಮೇಲೆ ಹೊರಿಸುವುದು ಸರಿಯಲ್ಲ,’’ ಎಂದು ಹೇಳಿದರು.

ಬಸವಣ್ಣನವರಿಗೆ ಅವಮಾನ ಸಹಿಸುವುದಿಲ್ಲ:

‘‘ಬಸವಣ್ಣನವರ ಕುರಿತು ನಿರ್ದಿಷ್ಟ ಅಜೆಂಡಾದೊಂದಿಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲೂಚರ್ಚಿಸಲಾಗಿದೆ. ಬಸವಮಂಟಪ ಕೃತಿ ನಿಷೇಧಿಸುವುದು ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ,’’ ಎಂದರು.

ಅರಮನೆ ಕುರಿತ ಹೇಳಿಕೆಗೆ ಈಗಲೂ ಬದ್ಧ: ಯತೀಂದ್ರ

ಮೈಸೂರು: ಅರಮನೆ ವಿಚಾರವಾಗಿ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದರು.

‘‘ಬಿಜೆಪಿಯವರು ಹೆಸರಿಗೆ ಮಾತ್ರ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಮಾತುಗಳಲ್ಲಿಸಂಸ್ಕೃತಿಯ ಪ್ರತಿಬಿಂಬ ಕಾಣುವುದಿಲ್ಲ. ನಾವು ಏನು ಹೇಳುತ್ತೇವೆಯೋ ಅದು ನಮ್ಮ ಆತ್ಮಸಾಕ್ಷಿಗೆ ಒಪ್ಪಿಗೆಯಾಗುವಂತಿರಬೇಕು. ನಾನು ಹೇಳಿರುವುದು ಸರಿಯಾಗಿದೆ ಎಂಬ ವಿಶ್ವಾಸ ನನಗಿದೆ. ಹೀಗಾಗಿ ಪ್ರತಿಯೊಬ್ಬರ ಟೀಕೆಗೂ ಉತ್ತರಿಸುವ ಅಗತ್ಯವಿಲ್ಲ,’’ ಎಂದರು.