ಸುಲೇಪೇಟ ತಾಲೂಕಿಗಾಗಿ ಪ್ರತಿಭಟನೆ

Contributed by: moiz.slpt@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಚಿಂಚೋಳಿ ತಾಲೂಕಿನ ಸುಲೇಪೇಟ ಹೋಬಳಿ ಕೇಂದ್ರವನ್ನು ನೂತನ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಸುಲೇಪೇಟ ತಾಲೂಕು ಬೇಡಿಕೆ ಸಮಿತಿ ವತಿಯಿಂದ ಬಸವೇಶ್ವರ ವೃತದಲ್ಲಿಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿಸಮಿತಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ಮಾತನಾಡಿ, ಸುಲೇಪೇಟ ಹೋಬಳಿ ವ್ಯಾಪ್ತಿಯಲ್ಲಿಸುಮಾರು 33 ಗ್ರಾಮಗಳಿದ್ದು, ಸುತ್ತಲಿನ 40ಕ್ಕೂ ಹೆಚ್ಚು ಗ್ರಾಮಗಳ ಜನರು ಸುಲೇಪೇಟವನ್ನು ಅವಲಂಬಿಸಿದ್ದಾರೆ. ಆಡಳಿತಾತ್ಮಕ, ಭೌಗೋಳಿಕ ಹಾಗೂ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸುಲೇಪೇಟವನ್ನು ನೂತನ ತಾಲೂಕಾಗಿ ಘೋಷಿಸುವುದು ಅಗತ್ಯವಾಗಿದೆ ಎಂದರು. ಸುಲೇಪೇಟವು ಹಲವು ಗ್ರಾಮಗಳ ಮಧ್ಯ ಭಾಗದಲ್ಲಿರುವುದರಿಂದ ಸಹಜ ಸಂಪರ್ಕ ಕೇಂದ್ರವಾಗಿದೆ. ಪ್ರಸ್ತುತ ಗ್ರಾಮೀಣ ಭಾಗದ ಜನರು ವಿವಿಧ ಸರಕಾರಿ ಕೆಲಸಗಳಿಗಾಗಿ ಚಿಂಚೋಳಿ ತಾಲೂಕು ಕೇಂದ್ರಕ್ಕೆ ತೆರಳಬೇಕಿದೆ. ಸುಲೇಪೇಟ ತಾಲೂಕಾದರೆ ಜನರಿಗೆ ಕಡಿಮೆ ಸಮಯ ಮತ್ತು ವೆಚ್ಚದಲ್ಲಿಸರಕಾರಿ ಸೇವೆಗಳು ಲಭ್ಯವಾಗಲಿವೆ. ಇದರಿಂದ ಗ್ರಾಮೀಣ ಜನರ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು. ಸುಲೇಪೇಟದಲ್ಲಿತಾಲೂಕು ಮಟ್ಟದ ಕಚೇರಿಗಳ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯಗಳು ಈಗಾಗಲೇ ಇವೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕೇಂದ್ರಸ್ಥಾನ, ಗ್ರೇಡ್ -1 ಗ್ರಾಮ ಪಂಚಾಯಿತಿ, ನಾಡಕಚೇರಿ, ಜೆಸ್ಕಾಂ ಕಚೇರಿ, ರೈತ ಸಂಪರ್ಕ ಕೇಂದ್ರ, ಸರಕಾರಿ ಗ್ರಂಥಾಲಯ, ಸರಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಪ್ರಥಮ ದರ್ಜೆ ಕಾಲೇಜು, ಐಟಿಐ ಕಾಲೇಜು, ಪೊಲೀಸ್ ಠಾಣೆ, ವಸತಿ ನಿಲಯಗಳು ಹಾಗೂ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಕಾಳಗಿ, ಯಡ್ರಾಮಿ ಹಾಗೂ ಕಮಲಾಪುರ ತಾಲೂಕುಗಳನ್ನು ರಚಿಸಿರುವ ಮಾದರಿಯಲ್ಲಿಸುಲೇಪೇಟದ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ, ವ್ಯಾಪಾರ ವಹಿವಾಟು ಮತ್ತು ಮೂಲಸೌಕರ್ಯ ಪರಿಗಣಿಸಿ ನೂತನ ತಾಲೂಕಾಗಿ ಘೋಷಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.