ಬ್ರಹ್ಮಾನಂದ ಎ.ನಿಡಗುಂದಾ ಕಲಬುರಗಿ ಚಿh್ಟahಞa್ಞa್ಞd.a್ಟa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಸೋನಾ ಮಸೂರಿ ಅಕ್ಕಿ ದರ ದಿಢೀರ್ ಶೇ.15ರಿಂದ 20ರಷ್ಟು ಇಳಿಕೆ ಕಂಡಿರುವುದು ತುಸು ನಿರಾಳ ತಂದಿದೆ. ತಿಂಗಳ ಹಿಂದೆ ಒಂದು ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿಗೆ ಬೆಲೆ 8,500 ರೂ. ಇತ್ತು. ಈಗ 6,500ಕ್ಕೆ ಇಳಿದಿದೆ. ಸಗಟು ಮಾರುಕಟ್ಟೆಯಲ್ಲಿಒಂದು ಕ್ವಿಂಟಾಲ್ ಅಕ್ಕಿಯ ಬೆಲೆ ಬರೋಬ್ಬರಿ 2 ಸಾವಿರದಷ್ಟು ಇಳಿಕೆಯಾಗಿದೆ. ಮುಖ್ಯವಾಗಿ 75 ಕೆ.ಜಿ ಭತ್ತದ ಮೂಟೆಯ ದರ ಸುಮಾರು 300-400 ರೂ. ವರೆಗೆ ಕಡಿಯಾಗಿರುವುದು ಇದಕ್ಕೆಲ್ಲಕಾರಣವಾಗಿದೆ. ಒಂದೆರಡು ದಿನದಲ್ಲಿಪ್ರತಿ ಕೆಜಿಗೆ 10ರಿಂದ 20ರವರೆಗೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿಸದ್ಯ ಕೆಜಿಗೆ 65ರಿಂದ 70ರೂ. ಚಿಲ್ಲರೆಯಾಗಿ ಸಿಗಲಿದೆ. ಭತ್ತದ ಪೂರೈಕೆ ಹೆಚ್ಚಳವೇ ಕಾರಣ: ಅಕ್ಕಿ ದರ ಇಳಿಕೆಗೆ ಗಂಗಾವತಿ, ಕಾರಟಗಿ ಭಾಗ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಸದ್ಯ ಈ ಭಾಗಗಳಲ್ಲಿಭತ್ತದ ಕಟಾವು ಕಾರ್ಯ ಪೂರ್ಣಗೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ಬರುತ್ತಿದೆ. ಇದರಿಂದ ಭತ್ತದ ಲಭ್ಯತೆ ಹೆಚ್ಚಾಗಿ ಅಕ್ಕಿ ಉತ್ಪಾದನೆಯೂ ಹೆಚ್ಚಳವಾಗಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿಅಕ್ಕಿ ದರ ಇಳಿಕೆಯಾಗಿದೆ. ಖರೀದಿ ಮಾಡಿದವರು ಪರೇಷಾನ್ : ಕಳೆದ ತಿಂಗಳು ಸೋನಾಮಸೂರಿ ಅಕ್ಕಿಯ ಬೆಳೆ 26 ಕೆ.ಜಿಗೆ 2,300-2,500 ರೂ. ವರೆಗೆ ತಲುಪಿತ್ತು. ಬರಗಾಲದ ಕಾರಣ ಮುಂದಿನ ದಿನಗಳಲ್ಲಿಇನ್ನು ಹೆಚ್ಚಿನ ಬೆಲೆ ಏರಿಕೆ ಆಗಬಹುದು ಎಂದು ಸುದ್ದಿ ಹಬ್ಬಿತ್ತು. ಈ ವೇಳೆ ಜನಸಾಮಾನ್ಯರು ಮನೆಗೆ ಬೇಕಾದ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿಖರೀದಿ ಮಾಡಿದ್ದರು. ತಿಂಗಳಲ್ಲಿಯೇ ಅಕ್ಕಿ ಬೆಲೆ ಇಳಿದಿರುವುದು ಹಲವರಿಗೆ ಸಂತಸ ತಂದರೆ, ಈಗಾಗಲೇ ದುಬಾರಿ ದರದಲ್ಲಿಖರೀದಿ ಮಾಡಿದವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.