ಉಚಿತ ಸಾಮೂಹಿಕ ವಿವಾಹ | ಕೇಸರಿ ಸಂಗಮ | ಲಕ್ಷ ಬಿಲ್ವಾರ್ಚನೆ | ಶಿವಾರತಿ
(((ಗಮನಿಸಿ: ಈ ಸುದ್ದಿಗೆ ರಿಕ್ವೆಸ್ಟ್ ಹಾಕಿದ್ದಾರೆ. ನಮ್ಮಾಸ್ ಮುಖಪುಟದಲ್ಲಿಜಾಗದ ಸಮಸ್ಯೆಯಾದರೆ ಒಳಗಿನ ಪುಟದಲ್ಲಾದರೂ ಆದೀತು. ಆದರೆ ಸುಂದರವಾಗಿ ಡಿಸ್ ಪ್ಲೇ ಮಾಡಲು ಮನವಿ.)ವಿಕ ಸುದ್ದಿಲೋಕ ಪುತ್ತೂರು
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಗಿರಿಜಾ ಕಲ್ಯಾಣೋತ್ಸವ ಸಮಿತಿ ಸಾರಥ್ಯದಲ್ಲಿಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಡಿ.12 ಮತ್ತು 13ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿವಿಜೃಂಭಣೆಯಿಂದ ನಡೆಯಲಿದೆ ಎಂದು ಟ್ರಸ್ಟ್ ಸ್ಥಾಪಕ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಗಿರಿಜಾ ಕಲ್ಯಾಣೋತ್ಸವದ ಜತೆಯಲ್ಲಿಲಕ್ಷ ಬಿಲ್ವಾರ್ಚನೆ, ಉಚಿತ ಸಾಮೂಹಿಕ ವಿವಾಹ, ಕೇಸರಿ ಸಂಗಮ ಹಿಂದೂ ಸಮಾವೇಶ ಮತ್ತು ಅಪೂರ್ವ ಶಿವಾರತಿ ನಡೆಯಲಿದೆ. ಹೊರೆಕಾಣಿಕೆ, ವೈಭವದ ಶೋಭಾಯಾತ್ರೆ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ವೈವಿಧ್ಯ, ಅನ್ನದಾನ, ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಪ್ರಥಮ ಬಾರಿಗೆ: ಕಳೆದ 3 ವರ್ಷ ದೇವರಮಾರು ಗದ್ದೆಯಲ್ಲಿಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ನಡೆಸಲಾಗಿದೆ. ಕಳೆದ ವರ್ಷ ಸಂಘ ಶತಾಬ್ಧಿ ಹಿನ್ನೆಲೆಯಲ್ಲಿಉಚಿತ ಸಾಮೂಹಿಕ ವಿವಾಹ ನಡೆಸಲಾಗಿದ್ದು, 16 ಜೋಡಿ ಮದುವೆಯಾಗಿದ್ದಾರೆ. ಈ ಬಾರಿ ಈಗಾಗಲೇ 12 ಜೋಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ನಿಶ್ಚಿತಾರ್ಥ, ಕಚೇರಿ ಉದ್ಘಾಟನೆ: ವಿವಾಹಾರ್ಥಿ ಜೋಡಿಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನ.29ರಂದು ದೇವಸ್ಥಾನದ ಸಭಾಭವನದಲ್ಲಿನಡೆಯಲಿದೆ. ಇದೇ ವೇಳೆ ಚಪ್ಪರ ಮುಹೂರ್ತ ಮತ್ತು ಕಾರ್ಯಾಲಯ ಉದ್ಘಾಟನೆ ನಡೆಯಲಿದೆ.
ಹೊರೆಕಾಣಿಕೆ ಸಮರ್ಪಣೆ: ಡಿ.11ರಂದು ಸಂಜೆ 4 ಗಂಟೆಯಿಂದ ದರ್ಬೆ ವೃತ್ತದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ನಾನಾ ಭಾಗಗಳಿಂದ ತರಲಾಗುವ ಹಸಿರುವಾಣಿಯನ್ನು ಮೆರವಣಿಗೆ ಮೂಲಕ ತಂದು ಸಮರ್ಪಿಸಲಾಗುತ್ತದೆ ಎಂದರು.
ಲಕ್ಷ ಬಿಲ್ವಾರ್ಚನೆ: ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ಡಿ.12ರಂದು ಬೆಳಗ್ಗೆ 7ರಿಂದ ನಡೆಯಲಿದೆ. ಮಧ್ಯಾಹ್ನದ ಸೇವೆಯ ಕಲಶಾಭಿಷೇಕ ಸಂಪನ್ನಗೊಳ್ಳಲಿದೆ. ರುದ್ರಮಂಟಪದಲ್ಲಿಬೆಳಗ್ಗಿನಿಂದಲೇ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ ಬೊಳುವಾರಿನಿಂದ ಶಿವ-ಪಾರ್ವತಿ ದೇವರ ಮೂರ್ತಿಗಳ ವೈಭವದ ಶೋಭಾಯಾತ್ರೆ ನಡೆಯಲಿದೆ. ರುದ್ರಮಂಟಪದಲ್ಲಿದೇವರು ಆರೂಢರಾದ ಬಳಿಕ ಕೇಸರಿ ಸಂಗಮ ಸಮಾವೇಶ ನಡೆಯಲಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸೀತಾ ಪರಿವಾರ ಅಧ್ಯಕ್ಷೆ ಪ್ರೇಮಾ ರಾಧಾಕೃಷ್ಣ ರೈ, ಗಿರಿಜಾ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಪುರುಷ ಮುಗೇರಡ್ಕ, ಅಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ ಉಪಸ್ಥಿತರಿದ್ದರು.
--ಬಾಕ್ಸ್ --
12 ಹಿಂದೂ ಸಂತರ ಸಂಗಮ
ಡಿ.12ರಂದು ರಾತ್ರಿ ನಡೆಯಲಿರುವ ಕೇಸರಿ ಸಂಗಮ ಸಮಾವೇಶದಲ್ಲಿನಾಡಿನ 12 ಸಂತರು ಆಶೀರ್ವಚನ ನೀಡಲಿದ್ದಾರೆ. ಅಂದು ರಾತ್ರಿ ಕೇರಳದ ಪ್ರಸಿದ್ಧ ತಂಡದಿಂದ ಭಜನ್ ಪ್ರದರ್ಶನಗೊಳ್ಳಲಿದೆ.
ಡಿ.13ರಂದು ಬೆಳಗ್ಗೆ ಸುಪ್ರಭಾತ ಪೂಜೆ, ಮಧ್ಯಾಹ್ನ ಉಚಿತ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ,ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ.
ಡಿ.12 ಮತ್ತು 13ರಂದು ರಾತ್ರಿ ಪುರೋಹಿತರ ತಂಡ ಕಾಶಿಯಲ್ಲಿನಡೆಯುವ ಗಂಗಾರತಿ ಮಾದರಿಯಲ್ಲಿಶಿವಾರತಿ ನಡೆಸಿಕೊಡಲಿದೆ. ಏಕಕಾಲದಲ್ಲಿಹಲವು ಪುರೋಹಿತರು ಮೆಗಾ ಆರತಿಗಳನ್ನು ಮಹಾದೇವನಿಗೆ ಬೆಳಗಲಿದ್ದಾರೆ. ಉಚಿತ ಸಾಮೂಹಿಕ ವಿವಾಹದಲ್ಲಿಮದುವೆಯಾಗುವ ದಂಪತಿಗಳಿಗೆ ಕರಿಮಣಿ, ವಸ್ತ್ರ ಸೇರಿದಂತೆ ಎಲ್ಲಸಾಹಿತ್ಯಗಳನ್ನು ಒದಗಿಸಲಾಗುತ್ತದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.