30ರಂದು ಕುವೆಂಪು ವಿವಿ ಮುಂದೆ ಪ್ರತಿಭಟನೆ

Contributed by: aatish.kannale@timesofindia.com|Vijaya Karnataka•
30
30ರಂದು ಕುವೆಂಪು ವಿವಿ ಮುಂದೆ ಪ್ರತಿಭಟನೆ

ವಿಕ ಸುದ್ದಿಲೋಕ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅವ್ಯವಸ್ಥೆಗಳ ವಿರುದ್ಧ ನ.30ರಂದು ಬೆಳಗ್ಗೆ 10.30ಕ್ಕೆ ವಿವಿ ಮುಂಭಾಗದ ರಸ್ತೆಯಲ್ಲಿಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ, ಮೌಲ್ಯಮಾಪನ ಲೋಪ ಸೇರಿದಂತೆ ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲದಕ್ಕೂ ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆಡಳಿತಾತ್ಮಕ ಲೋಪಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ರಾಜ್ಯಪಾಲರ ಗಮನ ಸೆಳೆಯುವವರೆಗೂ ಹೋರಾಟ ಮುಂದುವರಿಸಲಾಗುವುದು. ಎನ್ ಇಪಿ ಜಾರಿಯಾದ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ಈವರೆಗೆ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ವಿತರಿಸಿಲ್ಲ. ಶುಲ್ಕ ಪಾವತಿಸಿದ್ದರೂ ಪ್ರಮಾಣಪತ್ರ ನೀಡದೆ ವಿದ್ಯಾರ್ಥಿಗಳನ್ನು ಕಾಯಿಸುವಂತಾಗಿದೆ ಎಂದು ಆರೋಪಿಸಿದರು.

ಮೋರ್ಚಾದ ಪ್ರಮುಖರಾದ ಅರುಣ್ ಕುಗ್ವೆ, ದರ್ಶನ್ , ಎಸ್ .ಚಂದ್ರಶೇಖರ್ , ಎನ್ .ಮಂಜುನಾಥ್ , ಕೆ.ಸಂಜಯ್ , ಯಶಸ್ವಿ ಕಡ್ತುರ್ , ಬೆಣ್ಣೆ ಪ್ರವೀಣ್ , ಯುವರಾಜ್ , ವಿವೇಕ್ , ಅಜಯ್ ಇತರರಿದ್ದರು.