ವೆಯ್ ್ಟ ಲಿಫ್ಟಿಂಗ್ ನಲ್ಲಿರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Contributed by: bkyashas2010@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಕಡಬ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದಲ್ಲಿಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಐದನೇ ಮಿನಿ ಕ್ರೀಡಾಕೂಟ 2026ರ ಭಾರ ಎತ್ತುವ ಸ್ಪರ್ಧೆಯಲ್ಲಿಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜೂನಿಯರ್ಸ್ ರಾಜ್ಯಮಟ್ಟದ ವೆಯ್ ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿಶಾಲೆಯ ವಿದ್ಯಾರ್ಥಿನಿ, ಕೊೖಲ ಗ್ರಾಮದ ಕಲ್ಕಾಡಿ ಮನೆ ಹರಿಶ್ಚಂದ್ರ ಮತ್ತು ಉಷಾ ದಂಪತಿ ಪುತ್ರಿ ಯಶಿಕ ಎಚ್ . ಸನಿಲ್ 61 ಕೆ.ಜಿ. ವಿಭಾಗದಲ್ಲಿಬೆಳ್ಳಿಯ ಪದಕ ಗಳಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅದೇ ರೀತಿ, ಆಲಂಕಾರು ಗ್ರಾಮದ ಕಂದ್ಲಾಜೆ ಮನೆ ಗಣೇಶ ದೇವಾಡಿಗ ಮತ್ತು ಅಶ್ವಿನಿ ದಂಪತಿಯ ಪುತ್ರ ವಿಶ್ವಾಸ್ ದೇವಾಡಿಗ ಅವರು 60 ಕೆ.ಜಿ. ವಿಭಾಗದಲ್ಲಿಕಂಚಿನ ಪದಕ ಗಳಿಸಿದ್ದಾರೆ. ಪೆರಾಬೆ ಗ್ರಾಮದ ಕುಂಟ್ಯಾನ ಮನೆ ಮೋನಪ್ಪ ಗೌಡ ಮತ್ತು ಮೋಹಿನಿ ಕೆ. ದಂಪತಿಯ ಪುತ್ರಿ ಭುವಿ ಕೆ. 49 ಕೆ.ಜಿ. ವಿಭಾಗದಲ್ಲಿಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಗಟ್ಟೆಯ ವೀರಭದ್ರಪ್ಪ ಮತ್ತು ಜಯಶ್ರೀ ದಂಪತಿಯ ಪುತ್ರ ಚರಣ್ ಅವರು 65 ಕೆ.ಜಿ. ವಿಭಾಗದಲ್ಲಿಸ್ಪರ್ಧೆಯಲ್ಲಿಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ನಿವೃತ್ತ ಸೇನಾನಿ ವಿಶ್ವನಾಥ ಗೌಡ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲರೈ ತರಬೇತಿ ನೀಡಿದ್ದಾರೆ.

ಫೊಟೋ....21ಕೆಡಿಬಿ ವಿಎಲ್

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.