ಪ್ರಚಾರ ಕೊರತೆ | ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಸ್ಥಳೀಯರ ಆಕ್ರೋಶ
ವಿಕ ಸುದ್ದಿಲೋಕ ಚಿಂತಾಮಣಿಜನರ ಬಳಿಗೆ ಸರಕಾರಿ ಸೇವೆಗಳನ್ನು ಕೊಂಡೊಯ್ಯಬೇಕೆಂಬ ಸರಕಾರದ ಮಹದೋದ್ದೇಶವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಸರಕಾರದ ಆದೇಶ ಉಲ್ಲಂಘನೆ ಮಾಡಬಾರದು ಎಂಬ ಏಕಮಾತ್ರ ಕಾರಣಕ್ಕೆ ಪ್ರಜಾಸೇವೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲೂಕಿನ ಮುರುಗಮಲ್ಲಹೋಬಳಿಯ ಸಿದ್ದೆಪಲ್ಲಿಕ್ರಾಸ್ ಬಳಿ ಇರುವ ಪಿಎಂಶ್ರೀ ಆದರ್ಶ ವಿದ್ಯಾಲಯ ಆವರಣದಲ್ಲಿಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವು ಸಾರ್ವಜನಿಕರ ನೀರಸ ಪ್ರತಿಕ್ರಿಯೆಯಿಂದಾಗಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿವಿಫಲವಾಗಿದ್ದು, ಅಧಿಕಾರಿಗಳ ಸೂಕ್ತ ಪ್ರಚಾರವಿಲ್ಲದ ಕಾರಣ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆಗೆ ಮೊಟಕುಗೊಳಿಸಿದರು.
ಗ್ರಾಮೀಣರಿಗೆ ಕಾರ್ಯಕ್ರಮ ಕುರಿತು ಸರಿಯಾದ ಮಾಹಿತಿ ತಲುಪದ ಹಿನ್ನೆಲೆಯಲ್ಲಿನಿರೀಕ್ಷಿತ ಸಂಖ್ಯೆಯಲ್ಲಿಸಾರ್ವಜನಿಕರು ಸುಳಿಯಲಿಲ್ಲ. ಪರಿಣಾಮವಾಗಿ, ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ತಾಲೂಕು ಆಡಳಿತದ ಅಧಿಕಾರಿಗಳು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ಸ್ಥಳದಿಂದ ನಿರ್ಗಮಿಸಿದ್ದು, ಸಾರ್ವಜನಿಕ ವಲಯದಲ್ಲಿತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸರಕಾರದ ಜನಪರ ಕಾರ್ಯಕ್ರಮಗಳು ಕೇವಲ ಕಾಟಾಚಾರದ ಔಪಚಾರಿಕತೆಗೆ ಸೀಮಿತವಾಗಬಾರದು. ಯೋಜನೆಗಳ ಲಾಭ ನಿಜವಾದ ಫಲಾನುಭವಿಗಳಿಗೆ ತಲುಪಬೇಕಾದರೆ ಅಧಿಕಾರಿಗಳು ಮುಂಚಿತವಾಗಿ ಗ್ರಾಮಗಳಲ್ಲಿಡಂಗುರ ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
21ಸಿಎಮ್ ವೈವಿ1
ಚಿಂತಾಮಣಿ ತಾಲೂಕಿನ ಭೂಮಿಶೆಟ್ಟಿಹಳ್ಳಿಯ ಆದರ್ಶ ಶಾಲೆ ಆವರಣದಲ್ಲಿನಡೆದ ಪ್ರಜಾಸೇವಾ ಆಂದೋಲನದಲ್ಲಿಅಹವಾಲು ಸ್ವೀಕರಿಸಿದ ತಹಸೀಲ್ದಾರ್ ಸುದರ್ಶನ್ ಯಾದವ್ .