ಎರಡು ತಿಂಗಳಿಂದ ವೈದ್ಯರಿಲ್ಲ*ಕೂಡಲೇ ನೇಮಕ ಮಾಡುವಂತೆ ಕೆ.ಹೊಸಕೋಟೆ ಗ್ರಾಮಸ್ಥರ ಆಗ್ರಹ
ವಿಕ ಸುದ್ದಿಲೋಕ ಹಾಸನ
ಆಲೂರು ತಾಲೂಕು ಕೆ.ಹೊಸಕೋಟೆ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಎರಡು ತಿಂಗಳಿನಿಂದ ವೈದ್ಯರಿಲ್ಲದೆ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕೂಡಲೇ ವೈದ್ಯರನ್ನು ನೇಮಿಸಬೇಕು ಎಂದು ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿಸುಮಾರು ಹತ್ತಾರು ಹಳ್ಳಿಗಳಿವೆ. ಇಲ್ಲಿವಾಸ ಮಾಡುವ ಬಹುತೇಕ ಜನಸಾಮಾನ್ಯರು ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ. ಕಾಡಾನೆ ಹಾವಳಿ ಪ್ರದೇಶವಾಗಿರುವುದರಿಂದ ಹಾಗೂ ಅನಾರೋಗ್ಯಕ್ಕೀಡಾದ ಸಂದರ್ಭ ದೂರದ ಮಗ್ಗೆ, ಪಾಳ್ಯ ಕೇಂದ್ರಗಳಿಗೆ ಹೋಗಿ ಬರಲು ಕಷ್ಟಸಾಧ್ಯವಾಗಿದೆ’’ ಎಂದು ದೂರಿದ್ದಾರೆ.
‘‘ರೋಗಿಗಳು ತಪಾಸಣೆ ಮತ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದು ವೈದ್ಯರಿಲ್ಲದೆ ವಾಪಸ್ ಹೋಗುತ್ತಿರುತ್ತಾರೆ. ಆರೋಗ್ಯ ಕೇಂದ್ರದಲ್ಲಿವೈದ್ಯರಿಲ್ಲದಿರುವ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ’’ ಎಂದು ರೈತ ಮುಖಂಡ ಕಾಡ್ಲೂರು ಧರ್ಮಣ್ಣ ತಿಳಿಸಿದ್ದಾರೆ.
ಈವರೆಗೆ ಕೆಲಸ ಮಾಡುತ್ತಿದ್ದ ವೈದ್ಯರು ರಾಜೀನಾಮೆ ಕೊಟ್ಟು ತೆರಳಿದ್ದಾರೆ. ಒಂದೂವರೆ ತಿಂಗಳು ಕಳೆಯುವವರೆಗೆ ಬೇರೆ ವೈದ್ಯರನ್ನು ನೇಮಿಸಲು ಕಾನೂನಿನಲ್ಲಿಅವಕಾಶವಿಲ್ಲ. ಸದ್ಯ ಅಕ್ಕಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರು, ವಾರದಲ್ಲಿತಲಾ ಎರಡು ದಿನ ಆರೋಗ್ಯ ಕೇಂದ್ರದಲ್ಲಿಕೆಲಸ ಮಾಡುತ್ತಿದ್ದಾರೆ. ತಿಂಗಳ ಅಂತ್ಯದಲ್ಲಿನೂತನ ವೈದ್ಯರ ನೇಮಕಾತಿ ಮಾಡುವ ಸಂಭವವಿದೆ.
-ಡಾ. ಸ್ನೇಹ, ತಾಲೂಕು ಆರೋಗ್ಯ ವೈದ್ಯಾಧಿಕಾರಿ
ಆಸ್ಪತ್ರೆಯಲ್ಲಿವೈದ್ಯರಿಲ್ಲದೆ ಆಗುತ್ತಿರುವ ಸಮಸ್ಯೆಯನ್ನು ಈಗಾಗಲೇ ಡಿಎಚ್ ಒ ಗಮನಕ್ಕೆ ತಂದಿದ್ದೇನೆ.