ಸಿಎಚ್ ಸಿಗಳ ಕತ್ತು ಹಿಸುಕಿದ ಸರಕಾರ

Contributed by: lakshmikanthakumar.boraiah@timesofindia.com|Vijaya Karnataka•
Vijay Karnataka
ಗ್ರಾಮೀಣ ಆರೋಗ್ಯ ಸೇವೆಗೆ ಸರಕಾರದ ನಿರ್ಲಕ್ಷ್ಯ

ಸಿಎಚ್ ಸಿಗಳ ಕತ್ತು ಹಿಸುಕಿದ ಸರಕಾರ
ವಿಕ ಸುದ್ದಿಲೋಕ ಶಿವಮೊಗ್ಗ

ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ತಾಲೂಕು ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸುವ ನಿರ್ಧಾರ ಕೈಗೊಂಡ ರಾಜ್ಯ ಸರಕಾರವು ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೆಸರಿಗೆ ಮಾತ್ರ ಉಳಿಸಿಕೊಂಡು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಿಗೆ ರೋಗಿಗಳು ಮುಗಿಬೀಳುವಂತೆ ಮಾಡಿದೆ.

ಗ್ರಾಮೀಣ ಪ್ರದೇಶದಲ್ಲಿಬಡ ಜನರ ಪಾಲಿಗೆ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಸಂಜೀವಿನಿಯಂತಿದ್ದವು. ಆದರೆ, ಈ ಆರೋಗ್ಯ ಕೇಂದ್ರಗಳಿಗೆ ಜನರು ಬರುತ್ತಿಲ್ಲ, ಹೆರಿಗೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣವೊಡ್ಡಿ ರಾಜ್ಯ ಸರಕಾರ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ತಜ್ಞ ವೈದ್ಯರನ್ನು ಹುದ್ದೆ ಸಮೇತವಾಗಿ ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿತು. ಶೀತ, ಕೆಮ್ಮು, ಜ್ವರ ಮತ್ತು ಇತರೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ಎಂಬಿಬಿಎಸ್ ವೈದ್ಯರ ಹುದ್ದೆಯನ್ನು ಮಾತ್ರ ಉಳಿಸಿದೆ. ಖಾಯಂ ವೈದ್ಯರಿಲ್ಲದ ಕಾರಣದಿಂದಾಗಿ ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗಿದೆ.

ಪರಿಣಾಮವಾಗಿ ಗ್ರಾಮೀಣ ಆರೋಗ್ಯ ಕೇಂದ್ರಗಳು ಇದ್ದೂ ಇಲ್ಲದಂತಾಗಿವೆ. ಕೇವಲ ಏಳೆಂಟು ತಿಂಗಳ ಹಿಂದೆ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಈಗ ಪೀಠೋಪಕರಣಗಳು, ಪರಿಕರಗಳು ಮಾತ್ರ ಉಳಿದುಕೊಂಡಿವೆ. ಸರಕಾರದ ಈ ಕ್ರಮದಿಂದಾಗಿ ಜಿಲ್ಲಾಮೆಗ್ಗಾನ್ ಬೋಧನಾ ಆಸ್ಪತ್ರೆ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜನರು ಸಣ್ಣ ಪುಟ್ಟ ಕಾಯಿಲೆಗಳಿಗೂ ಜಿಲ್ಲಾಕೇಂದ್ರಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿಹೊಳಲೂರು, ಆಯನೂರು, ಹೊಳೆಹೊನ್ನೂರು, ಆನವಟ್ಟಿ, ಶಿರಾಳಕೊಪ್ಪ, ಆನಂದಪುರ, ಕನ್ನಂಗಿಯಲ್ಲಿಹೆಸರಿಗೆ ಮಾತ್ರ ಸಿಎಚ್ ಸಿಗಳು ಉಳಿದುಕೊಂಡಿವೆ. ತಾಲೂಕು ಆಸ್ಪತ್ರೆಯೇ ಇಲ್ಲದ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿಗ್ರಾಮೀಣರ ಪಾಲಿಗೆ ಆಯನೂರು ಮತ್ತು ಹೊಳಲೂರು ಸಿಎಚ್ ಸಿಗಳೇ ದೊಡ್ಡ ಆಸ್ಪತ್ರೆಗಳಾಗಿದ್ದವು. ಅತಿಹೆಚ್ಚು ಬೇಡಿಕೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು ಹಾಗೂ ಇತರೆ ತಜ್ಞ ವೈದ್ಯರು ಇದ್ದಾಗ ದಿನಕ್ಕೆ 350ರಿಂದ 400 ರೋಗಿಗಳು ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಈಗ ರೋಗಿಗಳ ಸಂಖ್ಯೆ 100 ಸಹ ದಾಟುತ್ತಿಲ್ಲ. ಇದರ ನಡುವೆ ಸರಕಾರದ ವಿವಿಧ ಯೋಜನೆಗಳ ಕಾರಣದಿಂದಾಗಿ ವೈದ್ಯಾಧಿಕಾರಿಗೆ ಆಸ್ಪತ್ರೆಗಿಂತ ಹೊರಗಿನ ಓಡಾಟವೇ ಜಾಸ್ತಿಯಂತೆ. ಹೀಗಾಗಿ ಅವರು ಆಸ್ಪತ್ರೆಯಲ್ಲಿಇರುವುದೇ ಕಡಿಮೆ.

----------------

ಹೆಸರಿಗೆ ಉಳಿದ ಹೊಳಲೂರು ಆಸ್ಪತ್ರೆ

ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ ಗಡಿಯಲ್ಲಿರುವ ಹೊಳಲೂರು ಆಸ್ಪತ್ರೆಯು ಈ ಮೂರು ತಾಲೂಕುಗಳ ಸುಮಾರು 10 ಪಂಚಾಯಿತಿಗಳ ಜನರು ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ. ಸ್ತ್ರೀ ರೋಗ, ಮಕ್ಕಳ ತಜ್ಞರು, ದಂತ, ಅರಿವಳಿಕೆ ಸೇರಿದಂತೆ ಐವರು ತಜ್ಞ ವೈದ್ಯರಿದ್ದರು. ದಿನಕ್ಕೆ 350ರಿಂದ 400 ರೋಗಿಗಳು ಇರುತ್ತಿದ್ದರು. ತಿಂಗಳಿಗೆ 25 ಹೆರಿಗೆಗಳಾಗುತ್ತಿದ್ದವು. ಈಗ ಗುತ್ತಿಗೆ ಆಧಾರದ ಮೇಲೆ ಒಬ್ಬರು ಆಯುಷ್ ಮತ್ತು ಇಬ್ಬರು ಎಂಬಿಬಿಎಸ್ ವೈದ್ಯರಿದ್ದಾರೆ. ಇನ್ನೊಂದು ವಾರದಲ್ಲಿಮತ್ತೊಬ್ಬರು ಬಿಡುತ್ತಿದ್ದಾರೆ. ಅಲ್ಲಿಗೆ ಉಳಿಯುವ ವೈದ್ಯರು ಇಬ್ಬರೆ. 10 ಬೆಡ್ ಗಳ ಹೆರಿಗೆ ವಾರ್ಡ್ , ಶಸ್ತ್ರಚಿಕಿತ್ಸಾ ಕೊಠಡಿ, ಸೇರಿದಂತೆ ಹಲವು ವಿಭಾಗಗಳು ಬಳಕೆ ಇಲ್ಲದೆ ಉಳಿದಿವೆ.

ವೈದ್ಯರು ಮತ್ತು ಶುಶ್ರೂಷಕರಿಗಾಗಿ ಉಳಿದಿರುವ ವಸತಿಗೃಹಗಳು ಬಳಕೆ ಇಲ್ಲದೆ ಪಾಳು ಬಿದ್ದಿವೆ. ಇದೇ ರೀತಿ ಇನ್ನೊಂದು ವರ್ಷ ಮುಂದುವರಿದಲ್ಲಿಆಸ್ಪತ್ರೆಯೊಳಗಿನ ಮಂಚಗಳು, ಯಂತ್ರೋಪಕರಣಗಳು, ಪೀಠೋಪಕರಣಗಳು ಬಳಕೆ ಇಲ್ಲದೆ ತುಕ್ಕು ಹಿಡಿಯುವುದು ಖಚಿತ.

---------------

ಹೊಳಲೂರು ಆಸ್ಪತ್ರೆಯಲ್ಲಿಹಿಂದೆಲ್ಲಎಷ್ಟೊಳ್ಳೆ ವೈದ್ಯರಿದ್ದರು. ಈಗ ಯಾರೂ ಇಲ್ಲ. ಯಾವಾಗ ಬಂದರೂ ವೈದ್ಯರಿಲ್ಲಎನ್ನುತ್ತಾರೆ. ಕೆಮ್ಮು, ಶೀತ, ಜ್ವರಕ್ಕೂ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಹೀಗಿದ್ದ ಮೇಲೆ ಸರಕಾರ ಆಸ್ಪತ್ರೆ ಏಕೆ ಕಟ್ಟಬೇಕು.

*ರಂಗಪ್ಪ, ಹರಮಘಟ್ಟ, ಶಿವಮೊಗ್ಗ ತಾಲೂಕು.

--------------

ಫೋಟೊ:

16ಎಸ್ ಎಂಜಿ18

ಸದಾ ಜನರಿಂದ ಗಿಜಿಗುಡುತ್ತಿದ್ದ ಹೊಳಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿಈಗ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ.

16ಎಸ್ ಎಂಜಿ23

ತಜ್ಞ ವೈದ್ಯರಿಲ್ಲದೆ ಹೆರಿಗೆ ವಿಭಾಗ ಇದ್ದೂ ಇಲ್ಲದಂತಾಗಿದೆ.

16ಎಸ್ ಎಂಜಿ27

ತುರ್ತುಚಿಕಿತ್ಸಾ ವಿಭಾಗ ಹೆಸರಿಗಷ್ಟೇ ಉಳಿದಿದೆ.

16ಎಸ್ ಎಂಜಿ28

ಕಾಯಂ ವೈದ್ಯರಿಲ್ಲದೆ ವಸತಿಗೃಹವನ್ನು ಬಳಸದೆ ಪಾಳು ಬಿದ್ದಿದೆ.