ಪ್ರತಿಭಟನೆ ನಿರ್ಬಂಧದ ಆದೇಶ ವಿರೋಧಿಸಿ 28ರಂದು ಪ್ರತಿಭಟನೆ

Contributed by: dhananjaya.gowda@timesofindia.com|Vijaya Karnataka•
28
* ಫ್ರೀಡಂಪಾರ್ಕ್ನಲ್ಲೇ ಪ್ರತಿಭಟನೆ ನಡೆಸಬೇಕೆಂಬ ಆದೇಶ ಹಿಂಪಡೆಯಲು ಒತ್ತಾಯ

ವಿಕ ಸುದ್ದಿಲೋಕ ಬೆಂಗಳೂರು
ನಗರದಲ್ಲಿಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿರುವ ಆದೇಶವನ್ನು ಶೀಘ್ರ ಹಿಂಪಡೆಯಬೇಕೆಂದು ಒತ್ತಾಯಿಸಿ, ನ.28ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್ ) ನಿರ್ಧರಿಸಿದೆ.

ನಗರದಲ್ಲಿಪ್ರತಿಭಟಿಸುವ ಹಕ್ಕನ್ನು ನಿರ್ದಿಷ್ಟ ಜಾಗಕ್ಕೆ ಸೀಮಿತಗೊಳಿಸುವ ಆದೇಶದ ವಿರುದ್ಧ ಪಿಯುಸಿಎಲ್ ನೇತೃತ್ವದಲ್ಲಿವಿವಿಧ ಸಂಘಟನೆಗಳು ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಶಾಸಕರ ಭವನದಲ್ಲಿಶನಿವಾರ ಆಯೋಜಿಸಿದ್ದ ‘ಸ್ವಾತಂತ್ರ್ಯ ಉದ್ಯಾನವನದಿಂದ ಬೇಕಿದೆ ಸ್ವಾತಂತ್ರ್ಯ’ ಎಂಬ ದುಂಡು ಮೇಜಿನ ಸಭೆಯಲ್ಲಿಹಲವು ಸಂಘಟನೆಗಳ ಮುಖಂಡರು ಭಾಗವಹಿಸಿ, ಅಭಿಪ್ರಾಯ ದಾಖಲಿಸಿದರು.

ಬೆಸ್ಕಾಂ, ಬಿಡಿಎ, ಜಿಬಿಎ, ಜಲಮಂಡಳಿ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳಿಗೆ, ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇರುತ್ತವೆ. ಈ ಎಲ್ಲದಕ್ಕೂ ಫ್ರೀಡಂಪಾರ್ಕ್ನಲ್ಲಿಕುಳಿತು ಪ್ರತಿಭಟಿಸಲು ಸಾಧ್ಯವಿಲ್ಲ. ಹಾಗಾಗಿ, ಆಯಾ ಇಲಾಖೆಗಳ ಮುಂದೆಯೇ ಪ್ರತಿಭಟಿಸಬೇಕಿರುವುದು ಸೂಕ್ತ ಮತ್ತು ಸಮಂಜಸ. ಎಲ್ಲಸಮಸ್ಯೆ, ಅನ್ಯಾಯಗಳಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿಬಂದು ಪ್ರತಿಭಟಿಸಿ ಎನ್ನುವುದು ತಪ್ಪು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಉದ್ಯಾನಕ್ಕೆ ಪ್ರತಿಭಟನೆ ಸೀಮಿತಗೊಳಿಸಿರುವ ಆದೇಶವನ್ನು, ನ.26ರ ಸಂವಿಧಾನ ದಿನಾಚರಣೆಯೊಳಗೆ ಹಿಂಪಡೆಯಬೇಕು ಎಂದು ಗಡುವು ನೀಡಲಾಯಿತು. ಇಲ್ಲದಿದ್ದಲ್ಲಿ ನ.28ರಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿ, ಸಾಮೂಹಿಕ ನಾಗರಿಕ ಅಸಹಕಾರ ಚಳವಳಿಯನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ದಸಂಸ ಮುಖಂಡ ಮಾವಳ್ಳಿ ಶಂಕರ್ , ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಸಿವಿಕ್ ನ ಕಾತ್ಯಾಯಿನಿ ಚಾಮರಾಜ್ , ಎಐಎಸ್ ಎ ಮುಖಂಡ ಹರೀಶ್ , ಹಿಂದೂ ಮಜ್ದೂರ್ ಕಿಸಾನ್ ಪಂಚಾಯತ್ ಕಾಳಪ್ಪ, ಸಿಐಟಿಯು ಗೋಪಾಲಗೌಡ, ಕೆಆರ್ ಎಸ್ ಪಕ್ಷ, ರಾಜ್ಯ ರೈತ ಸಂಘ, ಜಮಾತೆ ಇಸ್ಲಾಮಿಕ್ ಹಿಂದ್ ಕರ್ನಾಟಕ, ಸ್ಲಂ ಜನಾಂದೋಲನ ಕರ್ನಾಟಕ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬಾಕ್ಸ್ ...

ಪೊಲೀಸ್ ಆಯುಕ್ತರ ಭೇಟಿ:

ಸಭೆಯ ನಡೆಯುತ್ತಿರುವ ವಿಷಯ ತಿಳಿದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಆರ್ .ಹಿತೇಂದ್ರ ಅವರನ್ನು ಭೇಟಿ ಮಾಡುವಂತೆ ಹೋರಾಟದ ಹಕ್ಕಿಗಾಗಿ ಜನಾಂದೋಲನದ ನಿಯೋಗಕ್ಕೆ ಕರೆ ನೀಡಲಾಯಿತು. ತಕ್ಷಣ ಕೆಲವು ಪ್ರತಿನಿಧಿಗಳು ಆಯುಕ್ತರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿ ಬೇಡಿಕೆ ಮುಂದಿಟ್ಟರು.