ಸರಕಾರಿ ಶಾಲೆಗಳಲ್ಲಿಕೌಶಲ ಕ್ರಾಂತಿ

Contributed by: shantha.a@timesofindia.com|Vijaya Karnataka•
Vijay Karnataka
- 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿಗೆ | ಸಿಎಸ್ ಆರ್ ನಿಧಿ ಬಳಕೆ

ಶಾಂತಮೂರ್ತಿ ಬೆಂಗಳೂರು
ಘ್ಕಿsha್ಞಠಿha.aಃಠಿಜಿಞಛಿsಟ್ಛಜ್ಞಿdಜಿa.್ಚಟಞ

ರಾಜ್ಯದ ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಕೌಶಲವನ್ನೂ ಕಲಿಸಲು ಸಜ್ಜಾಗಿರುವ ಸರಕಾರ, ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿ ಮೂಲಕ 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ಶಿಕ್ಷಣ ನೀಡಲು ಸಿದ್ಧತೆ ನಡೆಸಿದೆ. ಪಠ್ಯದ ಜತೆಗೆ ಪ್ರಸ್ತುತ ಉದ್ಯಮಗಳ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ತಯಾರಿ ನಡೆಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲು ಚಿಂತನೆ ನಡೆದಿದೆ.

ರಾಜ್ಯದ ಸರಕಾರಿ ಶಾಲೆಗಳಲ್ಲಿ6 ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುವ ಸುಮಾರು 28 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ, ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ಶೇ. 40ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬದಲಾಗಿ ಉದ್ಯೋಗ ಹುಡುಕಲು ಮುಂದಾಗುತ್ತಿದ್ದು, ಕೌಶಲದ ಕೊರತೆಯಿಂದ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಸಜ್ಜಾಗಿರುವ ಸರಕಾರ, ಶಿಕ್ಷಣ ಇಲಾಖೆ ಹಾಗೂ ಕೌಶಲಾಭಿವೃದ್ಧಿ ನಿಗಮದ ಜತೆ ಸೇರಿ ಈ ಯೋಜನೆ ರೂಪಿಸಿದೆ. ಸರಕಾರದ ಬೊಕ್ಕಸದಿಂದ ಹಣ ನೀಡುವ ಬದಲು, ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿಯನ್ನು ಈ ಯೋಜನೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

ಯಾರಿಗೆ ಲಾಭ?

ಈ ಯೋಜನೆಯಿಂದ ರಾಜ್ಯದ ಸರಕಾರಿ ಶಾಲಾ-ಕಾಲೇಜುಗಳಲ್ಲಿವ್ಯಾಸಂಗ ಮಾಡುತ್ತಿರುವ 6 ರಿಂದ 12ನೇ ತರಗತಿಯ ಎಲ್ಲಾವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ವಿಷಯಗಳ ಜತೆಗೆ, ಕೈಗಾರಿಕೆ, ಕಂಪನಿಗಳ ಬೇಡಿಕೆಗೆ ತಕ್ಕ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಯಲಿದ್ದು, ಇದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ಉದ್ಯೋಗ ವಲಯದಲ್ಲಿಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುವ ನಿರೀಕ್ಷೆಯಿದೆ.

10ನೇ ತರಗತಿ ಬಳಿಕ ಅರೆಕಾಲಿಕ, ಪೂರ್ಣಾವಧಿಯ ಉದ್ಯೋಗಕ್ಕೆ ಅರ್ಹತೆ ಸಿಗಲಿದ್ದು, 12ನೇ ತರಗತಿ ಬಳಿಕ ಉದ್ಯೋಗ ಮೇಳಗಳಲ್ಲಿನೇರ ನೇಮಕಾತಿಗೆ ಅವಕಾಶ ಸಿಗಲಿದೆ. ಸ್ವಂತ ಉದ್ಯಮ ಆರಂಭಕ್ಕೆ ಸರಕಾರದಿಂದ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಇಲ್ಲಿನೀಡಲಾಗುವ ಪ್ರಮಾಣಪತ್ರವನ್ನೂ ಪರಿಗಣಿಸಲು ಚಿಂತನೆ ನಡೆದಿದೆ.

ಯೋಜನೆ ಅನುಷ್ಠಾನ ಹೇಗೆ?

ಖಾಸಗಿ, ಕಾರ್ಪೊರೇಟ್ ಕಂಪನಿಗಳ ಸಿಎಸ್ ಆರ್ ಅನುದಾನದ ಮೂಲಕ ಪ್ರತಿ ಜಿಲ್ಲೆಯ 10 ಮಾದರಿ ಸರಕಾರಿ ಶಾಲೆಗಳಲ್ಲಿಕೌಶಲ (ಸ್ಕಿಲ್ ) ಲ್ಯಾಬ್ ಆರಂಭವಾಗಲಿದೆ. ವಾರದಲ್ಲಿಎರಡು ದಿನ ಮಧ್ಯಾಹ್ನದ ಬಳಿಕ ಈ ತರಬೇತಿ ನಡೆಯಲಿದೆ.

12ನೇ ತರಗತಿ ಮುಗಿಯುವ ವೇಳೆಗೆ ಉದ್ಯೋಗ ಕೌಶಲ ಕಲಿಕೆ ಜತೆಗೆ, ಶಾಲಾ-ಕಾಲೇಜುಗಳಲ್ಲಿಡ್ರಾಪ್ ಔಟ್ ಪ್ರಮಾಣ ತಗ್ಗಿಸುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರದ ಖಾಸಗಿ ಶಾಲೆಗಳ ಮಾದರಿಯಲ್ಲೇ ಆಧುನಿಕ ತಂತ್ರಜ್ಞಾನ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬಾಕ್ಸ್

ಎರಡು ಹಂತದಲ್ಲಿಜಾರಿಗೆ ಚಿಂತನೆ

ಪ್ರತಿ ಜಿಲ್ಲೆಯ 10 ಸರಕಾರಿ ಮಾದರಿ ಶಾಲೆಗಳಲ್ಲಿ(ಒಟ್ಟು 310) ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಲ್ಯಾಬ್ ಗೆ ತಲಾ 5 ಲಕ್ಷ ರೂ. ಅಂದಾಜಿಸಲಾಗಿದ್ದು, ಎರಡನೇ ಹಂತದಲ್ಲಿ5,000 ಸರಕಾರಿ ಪ್ರೌಢಶಾಲೆಗಳಿಗೆ ಯೋಜನೆ ವಿಸ್ತರಣೆಗೆ ಗುರಿ ಹೊಂದಲಾಗಿದೆ. ಶಿಕ್ಷಕರಿಗೆ 15 ದಿನಗಳ ಕಾಲ ಉಚಿತ ತರಬೇತಿ ನೀಡುವ ಮೂಲಕ ಸ್ಕಿಲ್ ಮೆಂಟರ್ ಗಳಾಗಿ ನಿಯೋಜನೆ ಮಾಡಲಿದ್ದು, ವರ್ಷಕ್ಕೆ ಎರಡು ಬಾರಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಯಾವೆಲ್ಲವಿಷಯ ಬೋಧನೆ?

* 6 ರಿಂದ 8ನೇ ತರಗತಿ: ಬೇಸಿಕ್ ಕಂಪ್ಯೂಟರ್ , ಇಂಗ್ಲಿಷ್ ಸಂವಹನ, ಕೃಷಿ ಮತ್ತು ತೋಟಗಾರಿಕೆ ಪರಿಚಯ

* 9ರಿಂದ 10ನೇ ತರಗತಿ: ಎಲೆಕ್ಟ್ರಿಕಲ್ , ಪ್ಲಂಬಿಂಗ್ , ಬ್ಯೂಟಿ, ವೆಲ್ ನೆಸ್ , ರೊಬೊಟಿಕ್ಸ್ , ಕೋಡಿಂಗ್

* 11 ಮತ್ತು 12ನೇ ತರಗತಿ: ಎಐ, ಮಷಿನ್ ಲರ್ನಿಂಗ್ , ಬ್ಯಾಂಕಿಂಗ್ , ಸ್ವಯಂ ಉದ್ಯೋಗ

ಕೋಟ್ ..

ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಕ್ಷಣದ ಜತೆಗೆ, ಕೌಶಲ ಬೋಧನೆಗೆ ಸರಕಾರ ಹಲವು ಕ್ರಮ ಕೈಗೊಂಡಿದೆ. ಸರಕಾರದ ಸಲಹೆ-ಸೂಚನೆ ಮೇರೆಗೆ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಲಿದೆ.

-ಡಾ.ಕೆ.ವಿದ್ಯಾಕುಮಾರಿ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ