ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಅ.11 ರಿಂದ ಅ.21 ರವರೆಗೆ ಶರನ್ನವರಾತ್ರಿ ಮಹೋತ್ಸವ ವೈಭವದಿಂದ ಜರುಗಲಿದೆ.ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಭಜನಾ ಕಾರ್ಯಕ್ರಮ, ಸಂಜೆ 6 ರಿಂದ ರಾತ್ರಿ 9 ರವರೆಗೆ ಸಾಂಸ್ಕತ್ರೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿನಿತ್ಯ ರಂಗಪೂಜೆ, ಸ್ವರ್ಣಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ ನಡೆಯಲಿದ್ದು, ವಿಜಯದಶಮಿಯ ದಿನದಂದು ಸಾಮೂಹಿಕ ಚಂಡಿಕಾ ಹೋಮ , ದೇವರ ಉತ್ಸವ ಹಾಗೂ ಪ್ರತಿನಿತ್ಯ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಧರ್ಮದರ್ಶಿಗಳಾದ ಅನಿತಾ ಹಾಗೂ ದೇವರಾಯ ಮಂಜುನಾಥ ಶೇರೆಗಾರ ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಪೋಟೋ//10ಎಬಿ-ಡಿಯುಆರ್ 1// ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವರು
ಪೋಟೋ//10ಎಬಿ-ಡಿಯುಆರ್ 2// ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಲಾಯ.