ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿಅ. 11 ರಿಂದ 19 ರ ತನಕ ನವರಾತ್ರಿ ಪೂಜೆ ನಡೆಯಲಿದ್ದು, ವಿಶೇಷಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರಿಗಾಗಿ ನವರಾತ್ರಿ ಪೂಜೆ ಹಾಗೂ ಹೊಸ್ತಾರೋಹಣ ಕಾರ್ಯಕ್ರಮ ನಡೆಯಲಿದೆ.
ಕಡಬ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನ
ನವರಾತ್ರಿ ಉತ್ಸವದ ಅಂಗವಾಗಿ ಅ.11ರಿಂದ 20ರವರೆಗೆ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವರಾತ್ರಿ ಪೂಜೆ ಹಾಗೂ ಚಂಡಿಕಾಯಾಗದ ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನ
ಬಲ್ಯ ಶ್ರೀಉಮಾಮಹೇಶ್ವರೀ ದೇವಸ್ಥಾನದಲ್ಲಿಅ 11ರಿಂದ 21 ರ ವರೆಗೆ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನವರಾತ್ರಿ ಪೂಜೆ ಶನಿವಾರ ಪ್ರಾರಂಭಗೊಂಡಿದ್ದು, ಅ 20 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ನಡೆಯಲಿದೆ.