ಸೇವಾ ಕಾರ್ಯಗಳಲ್ಲಿತೊಡಗಿಕೊಳ್ಳಿ

Contributed by: sidramappasn@gmail.com|Vijaya Karnataka•
the need for awareness in educational and service activities
ಸೇವಾ ಕಾರ್ಯಗಳಲ್ಲಿತೊಡಗಿಕೊಳ್ಳಿ

ವಿಕ ಸುದ್ದಿಲೋಕ ತರೀಕೆರೆ
ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಮಾನವೀಯತೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ , ಯುವ ರೆಡ್ ಕ್ರಾಸ್ , ಮಹಿಳಾ ಸಬಲೀಕರಣ ಕೋಶ, ಇಕೋ ಕ್ಲಬ್ , ಐಕ್ಯೂಎಸಿ ಹಾಗೂ ಪಿ.ಎಂ. ಉಷಾ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಶಿಕ್ಷಣವು ವಿದ್ಯಾರ್ಥಿಗಳ ಮನೋವಿಕಾಸಗೊಳಿಸುವ ಕ್ರಿಯೆಯಾಗಿದ್ದು ಪ್ರತಿಯೊಬ್ಬರೂ ಸತ್ಪ್ರಜೆಗಳಾಗಬೇಕು ಎಂದರು.

ಪ್ರಾಂಶುಪಾಲ ಟಿ.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾದ ಚಟುವಟಿಕೆಗಳ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಚ್ .ಎಸ್ .ಶಿವರುದ್ರಪ್ಪ ಮಾತನಾಡಿದರು. 2025-26ನೇ ಸಾಲಿನಲ್ಲಿಅತಿ ಹೆಚ್ಚು ಅಂಕ ಗಳಿಸಿದ ಎಲ್ಲವಿಭಾಗದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ನಗದು ಬಹುಮಾನ ನೀಡಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಣ್ಣಯ್ಯ, ಟಿ.ಜಯರಾಮ್ , ಟಿ.ಹೇಮಾಲತಾ, ದತ್ತಿನಿಧಿ ದಾನಿ ಪ್ರಭಾಕರ್ ದಂಪತಿ ಹಾಗೂ ನಿವೃತ್ತ ಪ್ರಾಧ್ಯಾಪಕ ವಸಂತಕುಮಾರ್ , ಸಂಪತ್ ಕುಮಾರ್ , ವೇದಾನಂದ ಪ್ರಭು ಹಾಗೂ ಇತರರಿದ್ದರು.

10ತರೀಕೆರೆ2

ತರೀಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳನ್ನು ಉದ್ಘಾಟಿಸಲಾಯಿತು.