ಮಂಗಳೂರಿನಲ್ಲಿರಾರ ಯಲಿ, ಟಾರ್ಚ್ಲೈಟ್ ಪ್ರದರ್ಶನ

Contributed by: mahammed.arif@timesgroup.com|Vijaya Karnataka•
torchlight protest in mangalore
ಹೊಸದಿಲ್ಲಿಯಲ್ಲಿಹೋರಾಟಗಾರರ ಬಂಧನಕ್ಕೆ ಖಂಡನೆ

ವಿಕ ಸುದ್ದಿಲೋಕ ಮಂಗಳೂರು
ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಹೊಸದಿಲ್ಲಿಯಲ್ಲಿಅಘೋಷಿತ ತುರ್ತು ಪರಿಸ್ಥಿತಿ ಮತ್ತು ಹೋರಾಟಗಾರರ ಬಂಧನ ಖಂಡಿಸಿ ಮಂಗಳೂರಿನಲ್ಲಿಶನಿವಾರ ನಾನಾ ಸಂಘಟನೆಗಳಿಂದ ಪ್ರತಿರೋಧ ರಾರ ಯಲಿ, ಪ್ರತಿಭಟನಾ ಸಭೆ ಹಾಗೂ ಟಾರ್ಚ್ಲೈಟ್ ಪ್ರದರ್ಶನ ನಡೆಯಿತು.

ದ.ಕ. ಜಿಲ್ಲಾಪ್ರಜಾಪ್ರಭುತ್ವ ಉಳಿಸಿ ಆಂದೋಲನ ಸಮಿತಿ ನೇತೃತ್ವದಲ್ಲಿಕಾಂಗ್ರೆಸ್ , ಎಸ್ ಡಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ(ಎಂಎಲ್ ) ಲಿಬರೇಶನ್ ಪಕ್ಷಗಳು ಮತ್ತು ಜಾತ್ಯತೀತ ಸಂಘಟನೆಗಳ ಸಹಭಾಗಿತ್ವದಲ್ಲಿನಗರದ ಮಿಲಾಗ್ರಿಸ್ ಚರ್ಚ್ ಬಳಿಯಿಂದ ಹೊರಟ ರಾರ ಯಲಿಯು ಮಂಗಳೂರು ಮಿನಿ ವಿಧಾನಸೌಧದ ಮುಂದೆ ಸೇರಿತು.

ತ್ರಿವರ್ಣ ಧ್ವಜ ಹಿಡಿದು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದ ಹೋರಾಟಗಾರರು ಪ್ರತಿಭಟನಾ ಸಭೆ ನಡೆಸಿದ ಬಳಿಕ ಟಾರ್ಚ್ಲೈಟ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಿಪಿಐ (ಎಂಎಲ್ ) ಲಿಬರೇಶನ್ ಪಕ್ಷದ ದ.ಕ.ಜಿಲ್ಲಾಕಾರ್ಯದರ್ಶಿ ರಾಮಣ್ಣ ವಿಟ್ಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್ .ಪೂಜಾರಿ, ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಮಾಜಿ ಮೇಯರ್ ಕೆ. ಅಶ್ರಫ್ , ವೆಲ್ಫೇರ್ ಪಾರ್ಟಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರಂಗಿ ಮಾತನಾಡಿದರು.

ಎಸ್ ಡಿಪಿಐ ಜಿಲ್ಲಾನಗರ ಅಧ್ಯಕ್ಷ ಅಶ್ರಫ್ ಅಡ್ಡೂರು, ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಝಾಹಿದ್ ಮಲಾರ್ , ಆಮ್ ಆದ್ಮಿ ಪಕ್ಷದ ಮುಖಂಡ ಹಬೀಬ್ ಖಾದರ್ , ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ., ಮಂಗಳೂರು ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್ , ಪ್ರಕಾಶ್ ಸಾಲ್ಯಾನ್ , ಜೆ.ಅಬ್ದುಲ್ ಸಲೀಮ್ , ಜಿಲ್ಲಾಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್ .ಅಪ್ಪಿ, ಜಯಶೀಲ ಅಡ್ಯಂತಾಯ, ಅಬ್ದುಲ್ ರವೂಫ್ ಬಜಾಲ್ , ಅಶ್ರಫ್ ಬಜಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಎಸ್ ಐಆರ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ವಿನೋದ್ ಮಸ್ಕರೇನಸ್ ಸ್ವಾಗತಿಸಿದರು.

ಫೊಟೊ- 10ಎಂ-ಎಸ್ ಐಆರ್ ಪ್ರೊಟೆಸ್ಟ್

ಮಂಗಳೂರಿನಲ್ಲಿಶನಿವಾರ ನಾನಾ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.