ಕಾರಟಗಿ

Contributed by: shivaudbal68@gmail.com|Vijaya Karnataka•
2214 lakh insurance amount granted in karatagi farmer policy to parusurama dariman
ಕುಟುಂಬಕ್ಕೆ 22.14 ಲಕ್ಷ ವಿಮಾ ಮೊತ್ತ

ಅಂಚೆ ಜೀವ ವಿಮೆ
ವಿಕ ಸುದ್ದಿಲೋಕ ಕಾರಟಗಿ : ಅಂಚೆ ಜೀವ ವಿಮೆ (ಪಿಎಲ್ ಐ) ಯೋಜನೆಯಡಿ ಪಾಲಿಸಿದಾರರ ಕುಟುಂಬಕ್ಕೆ 22,14,223 ವಿಮಾ ಮೊತ್ತ ಮಂಜೂರಾಗಿದ್ದು,

ಕಾರಟಗಿ ಅಂಚೆ ಕಚೇರಿಯಲ್ಲಿಬುಧವಾರ ಫಲಾನುಭವಿ ಪರುಶುರಾಮ ದಾರಿಮನಿ ಅವರಿಗೆ ಚೆಕ್ ವಿತರಿಸಲಾಯಿತು.

ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ, ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಗ್ರಾಮೀಣ ಅಂಚೆ ಜೀವ ವಿಮೆ (ಆರ್ ಪಿಎಲ್ ಐ) ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ದೇವೇಂದ್ರ ವಡ್ಡರಹಟ್ಟಿ ಮಾತನಾಡಿದರು.

ಪರುಶುರಾಮ ದಾರಿಮನಿ ಅವರು ತಮ್ಮ ಪುತ್ರನ ಹೆಸರಿನಲ್ಲಿಪಿಎಲ್ ಐ ಪಾಲಿಸಿ ಮಾಡಿಸಿ ಎರಡು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದ್ದರು. ಬಳಿಕ ಪಾಲಿಸಿದಾರ

ಮೃತಪಟ್ಟ ಹಿನ್ನೆಲೆಯಲ್ಲಿ, ಪಾಲಿಸಿಯ ನಿಯಮಾನುಸಾರ 22.14 ಲಕ್ಷ ವಿಮಾ ಮೊತ್ತ ಮಂಜೂರಾಗಿದೆ. ಎಂದು ಅಂಚೆ ಪಾಲಕಿ ಪರಿಮಳಾ ಪಾಟೀಲ ತಿಳಿಸಿದರು.

ಈ ವೇಳೆ ಮಲ್ಲಿಕಾರ್ಜುನ, ಮಂಜುನಾಥ, ವೀರುಪಣ್ಣ, ದಸ್ತಗಿರಿಸಾಬ್ , ಚನ್ನಬಸಪ್ಪ, ಶರಣಕುಮಾರ, ಉಮೇಶ ಕಟ್ಟಿಮನಿ, ಮಂಜುನಾಥ ಪಾಟೀಲ, ಕುಸಮ ಗುಡಿ, ದಿವ್ಯ ಇದ್ದರು. ಶಿವರಾಜ ನಿರೂಪಿಸಿದರು.

ಕೆಪಿಎಲ್ 07 ಕೆ ಆರ್ ಟಿ 02 ಫೋಟೋ

ಕಾರಟಗಿ ಅಂಚೆ ಕಚೇರಿಯಲ್ಲಿಪಿಎಲ್ ಐ ವಿಮಾ ಮೊತ್ತದ ಚೆಕ್ ಅನ್ನು ಪರುಶುರಾಮ ದಾರಿಮನಿ ಅವರಿಗೆ ಅಂಚೆ ಅಧಿಕಾರಿಗಳು ವಿತರಿಸಿದರು.