ವಿಕ ಸುದ್ದಿಲೋಕ ಸಂಶಿಗ್ರಾಮದ ಫಕೀರೇಶ್ವರ ನಗರದಲ್ಲಿ ಸಹಿಪ್ರಾ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಸ್ .ವೈ.ಸೊರಟಿ ನಿವೃತ್ತರಾದ ನಿಮಿತ್ತ ಅವರ ಶಿಷ್ಯವೃಂದ ಮತ್ತು ಗುರುಬಳಗದಿಂದ ಸನ್ಮಾನಿಸಲಾಯಿತು.
ಶಿಕ್ಷಕ ಎಸ್ .ಸಿ.ಶಾನವಾಡ ‘ಸ್ವಸ್ಥ ಸಮಾಜದಲ್ಲಿಕೌಟುಂಬಿಕ ಪಾತ್ರ’ ಕುರಿತು ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಶಿಕ್ಷಕ ಡಿ.ಸಿ.ಬೊಮ್ಮನಗೌಡ್ರ ಮಾತನಾಡಿ, ಎಸ್ .ವೈ.ಸೊರಟಿ ಅವರು ಶಿಕ್ಷಕ ವೃತ್ತಿಯಲ್ಲಿತೋರಿದ ಕಾರ್ಯಕ್ಷಮತೆ ಮತ್ತು ತಾಳ್ಮೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಂದಗೋಳ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಗ್ರಾಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಆ.11.ಪೋಟೋ ಸಂಶಿ
ಸಂಶಿಯಲ್ಲಿನಿವೃತ್ತ ಮುಖ್ಯೋಪಾಧ್ಯಾಯ ಎಸ್ .ವೈ.ಸೊರಟಿ ಅವರನ್ನು ಸನ್ಮಾನಿಸಲಾಯಿತು.