ಅಭಿಷೇಕ್ , ಅಷ್ ರ್ ದೀಪ್ ಆಟಕ್ಕೆ ಒಲಿದ ಜಯ

Contributed by: manjunath.gowda@timesgroup.com|Vijaya Karnataka•
india secures victory against west indies by 14 runs
ವೆಸ್ಟ್ ಇಂಡೀಸ್ ಗೆ 14 ರನ್ ಸೋಲು | ಭಾರತಕ್ಕೆ 2-1ರ ಮುನ್ನಡೆ

ಇಂದೋರ್ : ಅಭಿಷೇಕ್ ಶರ್ಮಾ ಅವರ ಮಿಂಚಿನ ಅರ್ಧ ಶತಕದ ಜತೆಗೆ ಅಷ್ ರ್ ದೀಪ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡ 3ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ14 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಟಿ20ಯಲ್ಲಿಶ್ರೇಯಸ್ ಅಯ್ಯರ್ ಬಳಗ 2-1ರ ಮುನ್ನಡೆ ಸಾಧಿಸಿತು.
ಹೋಳ್ಕರ್ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿಭಾರತ ಒಡ್ಡಿದ 224 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ , 20 ಓವರ್ ಗಳಲ್ಲಿ7 ವಿಕೆಟ್ ಗೆ 209 ರನ್ ಗಳಿಸಿ ವೀರೋಚಿತ ಸೋಲನುಭವಿಸಿತು. ವಿಂಡೀಸ್ ಪರ ಪೂರನ್ , ಹೆಟ್ಮಾಯರ್ ಹಾಗೂ ಸ್ಟ್ರಿಂಗರ್ ಅತ್ಯುತ್ತಮ ಬ್ಯಾಟಿಂಗ್ ನಡೆಸಿದರೂ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಭಾರತ ಪರ ಅಷ್ ರ್ ದೀಪ್ (44ಕ್ಕೆ 3) ಮತ್ತು ನಮನ್ ಧೀರ್ (39ಕ್ಕೆ 2) ಉತ್ತಮ ಬೌಲಿಂಗ್ ಸಂಘಟಿಸಿದರು.

ಅಭಿಷೇಕ್ ಸಿಡಿಲಬ್ಬರದ ಬ್ಯಾಟಿಂಗ್ : ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದಿಂದ ಭಾರತ ತಂಡ ದೊಡ್ಡ ಕಲೆಹಾಕಿತು. ಸಂಜು ಸ್ಯಾಮ್ಸನ್ ಬ್ಯಾಟಿಂಗ್ ನಲ್ಲಿಸ್ಥಿರತೆ ಕಾಯ್ದುಕೊಳ್ಳಲು ವಿಫಲರಾದರು. ಆದರೆ ಅಭಿಷೇಕ್ ಮತ್ತು ಇಶಾನ್ ಜೋಡಿ ಕೆರಿಬಿಯನ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಈ ಮಧ್ಯೆ, 18 ಎಸೆತಗಳಲ್ಲಿ37 ರನ್ ಬಾರಿಸಿದ ಇಶಾನ್ , ರಾಸ್ಟನ್ ಚೇಸ್ ಬೌಲಿಂಗ್ ನಲ್ಲಿಔಟಾದರು. ಹೀಗಾಗಿ 40 ಎಸೆತಗಳಲ್ಲಿ108 ರನ್ ಗಳ 2ನೇ ವಿಕೆಟ್ ಮಹತ್ವದ ಜತೆಯಾಟ ಕೊನೆಗೊಂಡಿತು.

20ಕ್ಕೆ 4 ವಿಕೆಟ್ ಪತನ: ಅದ್ಭುತ ಆರಂಭ ಕಂಡ ಭಾರತ, ಮಧ್ಯಮ ಓವರ್ ಗಳಲ್ಲಿನಾಟಕೀಯ ಕುಸಿತ ಕಂಡಿತು. 18 ಎಸೆತಗಳಲ್ಲಿಅರ್ಧ ಶತಕ ಪೂರೈಸಿ ವೆಸ್ಟ್ ಇಂಡೀಸ್ ವಿರುದ್ಧ ಅತಿ ವೇಗದ 50 ರನ್ ಗಳಿಸಿದ ಜಗತ್ತಿನ 5ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದ ಅಭಿಷೇಕ್ , ಚುಟುಕು ಮಾದರಿಯಲ್ಲಿ2 ಸಾವಿರ ರನ್ ಸಹ ಪೂರೈಸಿದರು. ಆದರೆ ಕೇವಲ 20 ರನ್ ಗಳ ಅಂತರದಲ್ಲಿಅಭಿಷೇಕ್ ಸೇರಿ ನಾಲ್ವರನ್ನು ಕಳೆದುಕೊಂಡ ಪರಿಣಾಮ ರನ್ ವೇಗ ಕುಂಠಿತಗೊಂಡಿತು. ಆದಾಗ್ಯೂ ಆಲೌಟ್ ಗೆ ಮುನ್ನ 200 ರನ್ ಗಡಿ ದಾಟುವಲ್ಲಿಆತಿಥೇಯ ತಂಡ ಯಶಸ್ವಿಯಾಯಿತು.

ಸರಣಿಯ ಮೂರನೇ ಪಂದ್ಯ ಅ.14ರಂದು ಹೈದರಾಬಾದ್ ನಲ್ಲಿಲ ನಡೆಯಲಿದೆ.

68, ಕ್ಯಾಲೆಂಡರ್ ವರ್ಷದಲ್ಲಿಆಟಗಾರನೊಬ್ಬ (ಅಭಿಷೇಕ್ ಶರ್ಮ) ಗಳಿಸಿದ 2ನೇ ಅತ್ಯಧಿಕ ಸಿಕ್ಸರ್ ಗಳು. ಸೂರ್ಯಕುಮಾರ್ (68/2022) ಮೊದಲಿಗ

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್ ಗಳಲ್ಲಿ223(ಅಭಿಷೇಕ್ ಶರ್ಮ 69, ತಿಲಕ್ ವರ್ಮಾ 28, ನಿತೀಶ್ ರೆಡ್ಡಿ 21, ಅಕ್ಷರ್ 20; ರಾಸ್ಟನ್ ಚೇಸ್ 38ಕ್ಕೆ 2, ಶಮರ್ ಜೋಸೆಫ್ 54ಕ್ಕೆ 2, ಸ್ಟ್ರಿಂಗರ್ 50ಕ್ಕೆ 2).

ವೆಸ್ಟ್ ಇಂಡೀಸ್ : 20 ಓವರ್ ಗಳಲ್ಲಿ7 ವಿಕೆಟ್ ಗೆ 209 (ಪೂರನ್ 42, ಹೆಟ್ಮಾಯರ್ 43, ಸ್ಟ್ರಿಂಗರ್ 35*, ರುಧರ್ ಫೋರ್ಡ್ 32; ಅಷ್ ರ್ ದೀಪ್ 44ಕ್ಕೆ 3, ನಮನ್ 39ಕ್ಕೆ 2).