ಭಾರತದ ಸುರಕ್ಷತೆ, ಸಾರ್ವಭೌಮತೆ ಮತ್ತು ಕಾನೂನಿಗೆ ಅನುಗುಣವಾಗಿ ದೇಶದಲ್ಲಿಕಾರ್ಯನಿರ್ವಹಿಸಬೇಕು. ಕೇಂದ್ರ ಸರಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಮೋದಿ ಸರಕಾರ ಹೆದರುವುದಿಲ್ಲಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘‘ ಎಲಾನ್ ಮಸ್ಕ್ , ಅಂಬಾನಿ ಹಾಗೂ ದೇಶದ ಪ್ರಧಾನಿ ಕುರಿತು ವ್ಯಕ್ತವಾಗಿರುವ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿರಾಹುಲ್ ಗಾಂಧಿ ಅವರು ನೀಡಿದ ಬೆಂಬಲದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
‘‘ಭಾರತ ಜಗತ್ತಿನ ಅತಿದೊಡ್ಡ ನೆಟ್ ವರ್ಕ್ ಹೊಂದಿರುವ ದೇಶವಾಗಿರಬಹುದು. ಆದರೆ, ದೇಶದ ಜನರಿಗೆ ಅನುಕೂಲವಾಗುವಂತೆ ನಮ್ಮ ವಿಜ್ಞಾನಿಗಳು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಹಿಂದೆ ವಿದೇಶಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದ ನಾವು, ಇಂದು 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ6ಜಿ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸುತ್ತೇವೆ.ಹಿಂದೆ ಭಾರತವು ಒತ್ತಡಕ್ಕೆ ಮಣಿಯುವ ಪರಿಸ್ಥಿತಿ ಇತ್ತು. ಆದರೆ, ಈಗಿನ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ. ಹೀಗಾಗಿ, ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ ಬೆದರಿಕೆಗಳು ಅಥವಾ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ’’ ಎಂದು ಹೇಳಿದರು.
‘‘60 ವರ್ಷದ ಯುವ ನಾಯಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೆದರಿ ಎಲಾನ್ ಮಸ್ಕ್ ಅವರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಿಂದ ನೀಡಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಈ ಕುರಿತು ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ ನ ಅಧಿಕೃತ ನಿಲುವಾಗಿದೆ’’ ಎಂದು ಜೋಶಿ ಟೀಕಿಸಿದರು.
ಈ ದೇಶದಲ್ಲಿಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ. ಆದರೆ, ಕಾನೂನನ್ನು ಕೈಗೆತ್ತಿಕೊಂಡು ದೇಶದ ಕಾನೂನಿಗೆ ಗೌರವ ನೀಡದೆ ಆಸ್ತಿ-ಪಾಸ್ತಿಗಳನ್ನು ಹಾಳು ಮಾಡುವುದು ಪ್ರತಿಭಟನೆಯಲ್ಲ. ಇದು ಅರಾಜಕತೆ ಸೃಷ್ಟಿಸುವ ಪ್ರಯತ್ನ. ಅರಾಜಕತೆ ಸೃಷ್ಟಿಸಲು ಮುಂದಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ’’ ಎಂದು ತಿಳಿಸಿದರು.
‘‘50 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸಮಾಧಾನಪಡಿಸಲು ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಪ್ರಕ್ರಿಯೆಯಲ್ಲಿಕಾರ್ಯನಿರ್ವಹಿಸುವ ಅಧಿಕಾರಿಗಳು ರಾಜ್ಯ ಸರಕಾರದ ಅಧೀನದಲ್ಲಿರುವವರೇ ಆಗಿದ್ದಾರೆ. ಹೀಗಿರುವಾಗ, ಮತದಾರರ ಹೆಸರು ಅಳಿಸಿರುವ ಕುರಿತು ರಾಜ್ಯ ಸರಕಾರದ ಆರೋಪಗಳಿಗೆ ಸ್ಪಷ್ಟತೆ ಇರಬೇಕು’’ ಎಂದರು.
ಕೋಟ್ ..
ದೇಶದ ಶ್ರೇಷ್ಠ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಮಾದರಿಯಲ್ಲೇ ಎಸ್ ಐಆರ್ ನ್ಯಾಯ ಮತ್ತು ಅತ್ಯಂತ ಪಾರದರ್ಶಕ ಪದ್ಧತಿಯಲ್ಲಿನಡೆಯುತ್ತಿದೆ. ಹಾಗಿದ್ದರೂ ಇದರ ವಿರುದ್ಧ ಕಾಂಗ್ರೆಸ್ , ಸಿಜೆಪಿ ಹೋರಾಟ ನಡೆಸುತ್ತಿರುವುದು ಅರಾಜಕತೆ ಸೃಷ್ಠಿಸುವ ಹುನ್ನಾರವಾಗಿದೆ.