ದಸರಾ ಗತವೈಭವದ ದಿಕ್ಸೂಚಿ

Contributed by: Jaya shree|Vijaya Karnataka•
mysore dasara a confluence of tradition and culture
ದಸರಾ ಗತವೈಭವದ ದಿಕ್ಸೂಚಿ

- ಮೈಸೂರು ರಾಜಮನೆತನದ ಕೊಡುಗೆ ಸ್ಮರಿಸಿದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಾಡಿನ ಗತವೈಭವ, ವರ್ತಮಾನದ ಉತ್ಸಾಹ ಹಾಗೂ ಭವಿಷ್ಯಕ್ಕೆ ದಿಕ್ಸೂಚಿ ನೀಡುವ ಹಬ್ಬವಾಗಿದೆ. ಇದು ಭೂತ, ವರ್ತಮಾನ ಮತ್ತು ಭವಿಷ್ಯಗಳ ಸಂಗಮ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿಭಾನುವಾರ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತುಂಗಭದ್ರೆಯ ತೀರದಿಂದ ಕಾವೇರಿ ತೀರಕ್ಕೆ, ಮಹಾನವಮಿ ದಿಬ್ಬದಿಂದ ಮೈಸೂರಿಗೆ ಈ ಹಬ್ಬದ ಪರಂಪರೆ ಹರಿದುಬಂದಿದೆ. ಆದಿಕವಿ ಪಂಪನಿಂದ ಕುವೆಂಪುವರೆಗೆ ಕನ್ನಡದ ಕವಿಗಳು ಸಾಮರಸ್ಯದ ಸಂದೇಶ ಸಾರಿದ್ದಾರೆ. ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸಬೇಕು ಎಂಬುದೇ ಈ ನೆಲದ ಸಂಸ್ಕೃತಿಯಾಗಿದೆ. ಇಲ್ಲಿಹಚ್ಚಿದ ಕನ್ನಡದ ದೀಪ, ಆಶಯದ ದೀಪ ಎಂದಿಗೂ ಆರದಿರಲಿ ಎಂಬುದು ನನ್ನ ಪ್ರಾರ್ಥನೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ‘‘ಹಬ್ಬ ಇದ್ದ ಕಡೆ ಸಂಸ್ಕೃತಿ, ಸಂಸ್ಕೃತಿ ಇದ್ದ ಕಡೆ ಸರಸ್ವತಿ, ಸರಸ್ವತಿ ಇದ್ದ ಕಡೆ ಕಲೆ, ಕಲೆ ಇದ್ದ ಕಡೆ ಬೆಲೆ ಇರುತ್ತದೆ. ದಸರಾ ಕೇವಲ ಹಬ್ಬವಲ್ಲ, ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಕನ್ನಡಿಯೆನಿಸಿದೆ. ಮೈಸೂರಿನ ಸಾಂಸ್ಕೃತಿಕ ವೈಭವವು ನಾಡಿನ ಹೆಮ್ಮೆಯಾಗಿದ್ದು, ಈ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ’’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿಜನಪ್ರತಿನಿಧಿಧಿಗಳು, ಧಾರ್ಮಿಕ ಮುಖಂಡರು ಜನಪದ ಕಲಾವಿದರು ಹಾಗೂ ಗಣ್ಯರು ಉಪಸ್ಥಿತರಿದ್ದರು.