ಹುಕ್ಕೇರಿ: ಪಟ್ಟಣದ ಶ್ರೀ ಅಡವಿ ಸಿದ್ಧೇಶ್ವರ ಜಾನಪದ ಕಲಾವಿದರ ಸಂಘಕ್ಕೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿಪ್ರದರ್ಶನ ನೀಡಲು ಅವಕಾಶ ಲಭಿಸಿದೆ. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಡಾ. ಭೀಮಪ್ಪ ಹುದ್ದಾರ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಕೆಂಪವ್ವ ಹರಿಜನ ನೇತೃತ್ವದಲ್ಲಿಈ ತಂಡ ದಸರಾ ವೇದಿಕೆಗೆ ಆಯ್ಕೆಯಾಗಿದೆ. ಲಕ್ಷ್ಮೇ ಹರಿಜನ, ಸಿದ್ಧರಾಮ ನಾಯಕ, ಅಶೋಕ ನಾಯಕ, ಸಿದ್ಧೇಶ್ವರ ಬೆಳವಿ, ಬಸಗೌಡ ಪಾಟೀಲ, ಶೆಟ್ಟಿಗೌಡ ಪಾಟೀಲ, ವಸಂತ ಕುಬಣ್ಣಗೋಳ, ಭೀಮರಾಯ ಸೊಲ್ಲಾಪುರೆ, ಬಸವರಾಜ ಸನದಿ, ಸದ್ಯಪ್ಪ ಗಿರಿಯಾಳ ಮತ್ತು ಪುಂಡಲೀಕ ಕೋಟಬಾಗಿ ಕಲಾವಿದರ ತಂಡದಲ್ಲಿದ್ದು, ’ರಾಧಾನಾಟ’ ಸಣ್ಣಾಟ ಪ್ರದರ್ಶನ ನೀಡಲಿದ್ದಾರೆ. ಅ. 18ರಂದು ಮೈಸೂರಿನ ಅರಮನೆ ಆವರಣದಲ್ಲಿಈ ಸಣ್ಣಾಟದ ಪ್ರದರ್ಶನ ಜರುಗಲಿದೆ.
ಫೋಟೊ:(11 ಹುಕ್ಕೇರಿ 03): ಮೈಸೂರು ದಸರಾ ಉತ್ಸವದಲ್ಲಿಪ್ರದರ್ಶನ ನೀಡಲು ಆಯ್ಕೆಯಾದ ಹುಕ್ಕೇರಿಯ ಶ್ರೀ ಅಡವಿ ಸಿದ್ಧೇಶ್ವರ ಜಾನಪದ ಕಲಾವಿದರ ಸಂಘದ ಸದಸ್ಯರು.