ಕಾವ್ಯ ನಿಂತ ನೀರಲ್ಲಹರಿಯುವ ಜೀವನದಿ, ಕಾಲ ಕಾಲಕ್ಕೆ ಅದರ ಪಥ ಬದಲಾದರೂ ಸಮಾಜದ ಅಂಕುಡೊಂಕುಗಳಿಗೆ ಶೋಷಣೆಗಳಿಗೆ ಪ್ರತಿಕ್ರಿಯೆ ನೀಡುತ್ತಾ ಎಲ್ಲಾರೀತಿಯ ದಬ್ಬಾಳಿಕೆಗಳಿಗೆ ಪ್ರತಿರೋಧ ತೋರುತ್ತದೆ ಎಂದು ದಾವಣಗೆರೆಯ ಸಾಹಿತಿ ಜಿ.ಮುದ್ದುವೀರಸ್ವಾಮಿ ಹಿರೇಮಳಲಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿತ್ರಿಪದಿ ಕವಿ ಮಳಲಕೆರೆ ಗುರುಮೂರ್ತಿಯವರ ಸವಿ ನೆನಪಿಗಾಗಿ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘‘ನಮ್ಮೊಳಗೆ ಉದಯಿಸುವಂತಹ ಭಾವನೆಗಳನ್ನು ಭಾವಲಹರಿಯ ಮೂಲಕ ಹೊರಬಿಟ್ಟಾಗ ಕವಿತೆ ಹೊರಹೊಮ್ಮುತ್ತದೆ. ಕಾವ್ಯ ಏಕ ಕಾಲದಲ್ಲಿ ಅಂತರಂಗ ಮತ್ತು ಬಹಿರಂಗವನ್ನು ಪ್ರಭಾವಿಸುತ್ತದೆ. ಅದು ಸಹೃದಯದ ಅರಿವಿನ ಕಣ್ಣಾಗಿದೆ’’ ಎಂದರು.
ಹಿರಿಯ ಕವಿ ಡಾ.ಆನಂದ್ ಋುಗ್ವೇದಿ ಮಾತನಾಡಿ, ‘‘ಸಮಾಜದ ಅಂಕುಡೊಂಕುಗಳನ್ನು ತಮ್ಮ ಕವಿತೆಗಳ ಮೂಲಕ ಎತ್ತಿ ಹಿಡಿದು ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಕವಿತೆಗಳಿಗೆ ಮತ್ತು ಸಾಹಿತ್ಯಕ್ಕೆ ಇದೆ. ಕವಿಗಳು ಸಮಾಜದಲ್ಲಿಓರೆಕೋರೆಗಳನ್ನು ಮಾತ್ರ ಗಮನಿಸುತ್ತಾರೆ. ಅದರಂತೆ ಸಮಾಜದಲ್ಲಿನ ಸೌಂದರ್ಯ ಸಹ ನಮ್ಮ ಕವಿಗಳ ಮೂಲಕ ಬಣ್ಣಿಸಬಹುದಾಗಿದೆ. ಅಧ್ಯಾತ್ಮ ಮತ್ತು ಕಾವ್ಯಗಳು ಸೇರಿದರೆ ಮಾತ್ರ ಆತ ಉತ್ತಮ ಕವಿಯಾಗಲು ಸಾಧ್ಯ. ಇಲ್ಲವಾದರೆ ಕೇವಲ ಪ್ರಚಾರಕ ಕಲಾವಿದನಾಗುತ್ತಾನೆ. ಕವಿತೆಗೆ ಎಂದಿಗೂ ವಿನಾಶವಿಲ್ಲ. ಆದರೆ, ನಾವು ಬರೆಯುವಂತಹ ಕಾವ್ಯಗಳು ಚುಟುಕಾಗಿ ಅರ್ಥ ಗರ್ಭಿತವಾಗಿರಬೇಕು’’ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿ ಸಂಚಾಲಕಿ ಮಹಾಲಕ್ಷಿತ್ರ್ಮ ಮಾತನಾಡಿ, ‘‘ಕನ್ನಡ ನಾಡಿನಲ್ಲಿಕಲೆ, ಸಾಹಿತ್ಯ, ಸಂಸ್ಕೃತಿಗಳು ಅನಾವರಣಗೊಳ್ಳಬೇಕಾದರೆ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಜಿಲ್ಲಾಮಟ್ಟ ದಸರಾ ಕವಿಗೋಷ್ಠಿಯಲ್ಲಿಯುವ ಕವಿಗಳು ಮತ್ತು ಹಿರಿಯ ಕವಿಗಳು ಭಾಗವಹಿಸುವ ಮೂಲಕ ತಮ್ಮ ಭಾವನೆಗಳಲ್ಲಿನ ಭಾವನಾತ್ಮಕ ವಿಷಯಗಳನ್ನು ಕವಿತೆಗಳ ರೂಪದಲ್ಲಿಪ್ರಸ್ತುತ ಪಡಿಸಿದ್ದಾರೆ ಎಂದರು.
ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕೋರಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಮಾತನಾಡಿದರು. ಕವಿಗೋಷ್ಠಿಯಲ್ಲಿ25ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ರಂಗಸೌರಭ ನಾಟ್ಯಕಲಾ ಹವ್ಯಾಸಿ ಸಂಘದ ಅಧ್ಯಕ್ಷ ಎಂ.ಅಣ್ಣೋಜಿರಾವ್ , ಹಿರಿಯ ಸಾಹಿತಿ ಶಿವಯೋಗಿ ಹಿರೇಮಠ್ , ದಸರಾ ಕವಿಗೋಷ್ಠಿ ಸಂಘಟನಾ ಕಾರ್ಯದರ್ಶಿ ಡಾ. ನಮಿತಾ ಸತೀಶ್ , ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರೇಶ್ ಗಂಗಗೊಂಡನಹಳ್ಳಿ, ಇತರರು ಹಾಜರಿದ್ದರು.
----
11ಸಿಎಚ್ ಎನ್ ಪಿ1
ಚನ್ನಗಿರಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿಭಾನುವಾರ ನಡೆದ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿಯನ್ನು ಸಾಹಿತಿ ಜಿ.ಮುದ್ದುವೀರಸ್ವಾಮಿ ಹಿರೇಮಳಲಿ ಉದ್ಘಾಟಿಸಿದರು.